Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ನಿವೃತ್ತ ಯೋಧ ಗಿರೀಶ ಗೋರಗದ್ದೆ ಅವರಿಗೆ ಹೊಸನಗರದಲ್ಲಿ ಅದ್ಧೂರಿ ಸ್ವಾಗತ

ಹೊಸನಗರ : ತಾಲ್ಲೂಕಿನ ಜೇನಿ ಗ್ರಾಮ ಪಂಚಾಯಿತಿ ಅತಿ ಹೆಚ್ಚು ಯೋಧರನ್ನು ದೇಶಸೇವೆಗಾಗಿ ಸಮರ್ಪಿಸುವ ಮೂಲಕ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ ಎಂದು ಕಳೂರು ಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದುಮ್ಮ ವಿನಯಕುಮಾರ್ ತಿಳಿಸಿದರು.


ಅವರು ಪಟ್ಟಣದ ಈಡಿಗ ಸಭಾಭವನದಲ್ಲಿ ಜೇನಿ ಗ್ರಾಮ ಪಂಚಾಯಿತಿಯ ಗೋರಗದ್ದೆ ಗ್ರಾಮದ ಪರಮೇಶ್ವರ ಹಾಗೂ ರೇಣುಕಮ್ಮ ದಂಪತಿಗಳ ಪುತ್ರ ಗಿರೀಶ್ 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿ ಊರಿಗೆ ಬಂದ ಸಂದರ್ಭದಲ್ಲಿ ಪಟ್ಟಣದಲ್ಲಿ ತಾಲೂಕಿನ ಜನತೆಯ ಪರವಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಹೊಸನಗರ ತಾಲ್ಲೂಕು ಭಾರತೀಯ ಸೇನೆಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.

CLICK ಮಾಡಿ : ಹೊಂಬುಜ ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರ - ನವೋದಯ ಶಾಲೆಗೆ ಮೂವರು ವಿದ್ಯಾರ್ಥಿಗಳು ಆಯ್ಕೆ


ಸಮಾರಂಭದಲ್ಲಿ ಗೋರಗದ್ದೆ ಗಿರೀಶ್ ದಂಪತಿಗಳನ್ನು,  ಅವರ ತಂದೆತಾಯಿ, ಮಕ್ಕಳನ್ನು ನಾಗರೀಕರ ಪರವಾಗಿ ಅವಿಸ್ಮರಣೀಯವಾಗಿ ಗೌರವಿಸಲಾಯಿತು.
ವರ್ತಕರ ಸಂಘದ ಮಲೆಬೈಲ್ ಪೂರ್ಣೇಶ್, ಜಿ. ಇ. ಮುರಳೀಧರ್, ಎನ್.ಆರ್. ದೇವಾನಂದ್, ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ ಸ್ವಾಮಿರಾವ್, ಸಾಗರದ ಕೆ.ಎಸ್. ಪ್ರಶಾಂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ನಿವೃತ್ತ ಯೋಧರ ಸಂಘದ ಅಧ್ಯಕ್ಷ ರವಿಕುಮಾರ್ ಕೆರೆಕೊಪ್ಪ, ಷಣ್ಮುಖಪ್ಪ, ಕಿರಣ್ ಕುಮಾರ್, ಚೌಡಪ್ಪ, ವಿಜೇಂದ್ರ ಶೇಟ್, ಮಂಡಾನಿ ಮೋಹನ್, ಹುಲಗಾರು ಕೃಷ್ಣಮೂರ್ತಿ ಮೊದಲಾದವರು ಈ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಎಂ.ಪಿ. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.


ಸನ್ಮಾನಕ್ಕೂ ಮೊದಲು ಪಟ್ಟಣದ  ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಿಂದ ಈಡಿಗರ ಸಭಾಭವನದವರೆಗೆ ನಿವೃತ್ತ ಯೋಧ ಗಿರೀಶ್ ರವರನ್ನು ಅಲಂಕೃತ ತೆರೆದ ವಾಹನದಲ್ಲಿ ಪಟಾಕಿಗಳನ್ನು ಸಿಡಿಸುತ್ತಾ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಪಟ್ಟಣಕ್ಕೆ ಕರೆತರಲಾಯಿತು.

ಕಾಮೆಂಟ್‌ಗಳಿಲ್ಲ