Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ರವೀಶ್ ನಿಟ್ಟೂರು ಅವರಿಗೆ ಮಾತೃ ವಿಯೋಗ

ಹೊಸನಗರ : ತಾಲ್ಲೂಕಿನ ನಗರ ಹೋಬಳಿ ನಿಟ್ಟೂರು ಗ್ರಾಮದ ಸ್ನೇಹಜೀವಿ, ಜಮೀನುದಾರ ರವೀಶ್ ನಿಟ್ಟೂರು ಅವರ ತಾಯಿ ಗೌರಮ್ಮ (96) ಕೆಲವು ದಿನಗಳ ಅನಾರೋಗ್ಯದ ಬಳಿಕ ಸ್ವಗೃಹದಲ್ಲಿ ಶನಿವಾರ ತಡರಾತ್ರಿ ನಿಧನರಾದರು.

ತಾಲ್ಲೂಕಿನಾದ್ಯಂತ 'ದೊಡ್ಮನೆ ಜಮೀನುದಾರರು' ಎಂದೇ ಖ್ಯಾತರಾಗಿದ್ದ ದಿವಂಗತ ನಿಟ್ಟೂರು ಸುಬ್ರಾಯ ಅವರ ಧರ್ಮಪತ್ನಿ ಗೌರಮ್ಮ. ಮೃತರಿಗೆ ರವೀಶ್ ಮತ್ತು ಐದು ಹೆಣ್ಣುಮಕ್ಕಳಿದ್ದಾರೆ.

CLICK ಮಾಡಿ - ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷರಾಗಿ ಹೊಸನಗರದ ದತ್ತಾತ್ರೇಯ ಉಡುಪ ಆಯ್ಕೆ

ತಮ್ಮ ಹದಿಮೂರನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೃತರು ತೊಂಭತ್ತಾರು ವರ್ಷಗಳ ಕಾಲ ತುಂಬು ಜೀವನ ನಡೆಸಿದ್ದಾರೆ. ಜೀವನದಲ್ಲಿ ಒಮ್ಮೆಯೂ ಆಸ್ಪತ್ರೆಯ ಮೆಟ್ಟಿಲು ತುಳಿಯದ ಇವರು, ಇತ್ತೀಚಿಗೆ ಬ್ರೈನ್ ಸ್ಟ್ರೋಕ್‌ಗೊಳಗಾಗಿ ಕೋಮಾ ಸ್ಥಿತಿ ಸೇರಿದ ಒಂದು ವಾರದ ಬಳಿಕ  ಕೊನೆ ಉಸಿರೆಳೆದಿದ್ದಾರೆ.

ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದು, ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ತಾಲ್ಲೂಕಿನ ಬ್ರಾಹ್ಮಣ ಮಹಾಸಭಾ ಸೇರಿದಂತೆ ವಿವಿಧ ಸಮಾಜದ ಬಾಂಧವರು ಕೋರಿದ್ದಾರೆ.


ಕಾಮೆಂಟ್‌ಗಳಿಲ್ಲ