Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಕೋಡೂರಿನ ಕಾರಕ್ಕಿ ಹಾಗೂ ಕೆ.ಹುಣಸವಳ್ಳಿಯಲ್ಲಿ ಕೊಟ್ಟಿಗೆ ಮೇಲೆ ಮರ ಮುರಿದು ಬಿದ್ದು ಅಪಾರ ನಷ್ಟ

ಹೊಸನಗರ:  ತಾಲ್ಲೂಕಿನ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಗುಂಡಿ ಗ್ರಾಮದ ಶಾಂತಪುರ ವಾಸಿ ಸುಮ ಎನ್ನುವವರಿಗೆ ಸೇರಿದ ಜಾನುವಾರು ಕೊಟ್ಟಿಗೆ ಮೇಲೆ ಮಂಗಳವಾರ ಮಳೆಯಿಂದಾಗಿ ಮರ ಬಿದ್ದು ಕೊಟ್ಟಿಗೆ ಸಂಪೂರ್ಣವಾಗಿ ಜಖಂಗೊಂಡಿದೆ. 

ಕೊಟ್ಟಿಗೆ ಮೇಲೆ ಮರ ಬಿದ್ದಿದ್ದರಿಂದಾಗಿ ಯಾವುದೇ ಜಾನುವಾರುಗಳ ಸಾವು ಸಂಭವಿಸಿಲ್ಲ ಎಂದು ಸಂತ್ರಸ್ತ ಕುಟುಂಬದವರು ತಿಳಿಸಿದ್ದು, ಘಟನೆಯಿಂದ ಸಂತ್ರಸ್ತ ಕುಟುಂಬ ಆತಂಕದಲ್ಲಿ ದಿನದೂಡುವಂತಾಗಿದೆ. ವಿಷಯ ತಿಳಿದು ‌ಪಿಡಿಓ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹರಿದ್ರಾವತಿಯಲ್ಲಿ ಕೊಟ್ಟಿಗೆ ಮೇಲೆ ಬಿದ್ದ ಮರ 

ತಾಲ್ಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ. ಹುಣಸವಳ್ಳಿ ಗ್ರಾಮದ ವಾಸಿ ಎನ್‌.ಜಿ ನಾಗೇಶ ಬಿನ್ ಎನ್‌. ‌ಗುಂಡಪ್ಪ ಎನ್ನುವವರ ದನದ ಕೊಟ್ಟಿಗೆಯ ಮೇಲೂ ಮರ ಬಿದ್ದು ಕೊಟ್ಟಿಗೆಗೆ ಹಾನಿಯಾಗಿದೆ.

ತಾಲ್ಲೂಕಿನೆಲ್ಲೆಡೆ ಈ ಬಾರಿ ಮುಂಗಾರು ಮಳೆಯಿಂದ ಅನೇಕ ಅವಘಡಗಳು ನಿರಂತರವಾಗಿ ಸಂಭವಿಸುತ್ತಿದ್ದು, ಮಳೆ ಜಾಸ್ತಿಯಾದಷ್ಟೂ ಜನರು ಆತಂಕಗೊಳ್ಳುವಂತಾಗಿದೆ.


ಕಾಮೆಂಟ್‌ಗಳಿಲ್ಲ