Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದ ನೆಲ್ಲುಂಡೆಯಲ್ಲಿ ನೂತನ ಕಿರುಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ - ನಿರ್ಲಕ್ಷ್ಯ ಮಾಡುತ್ತಿರುವುದೇಕೆ ರಾಮಚಂದ್ರಪುರ ಗ್ರಾ.ಪಂ?!

ಹೊಸನಗರ: ತಾಲ್ಲೂಕಿನ ರಾಮಚಂದ್ರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲುಂಡೆ ಗ್ರಾಮದಲ್ಲಿ ಕಳೆದ ಕೆಲವು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಕಿರುಸೇತುವೆಯೊಂದು ಭಾಗಶಃ ಕುಸಿತಗೊಂಡಿದ್ದು, ಸಂಚಾರ ಹಾಗೂ ಕೃಷಿ ಚಟುವಟಿಕೆಗೆ ವಿಪರೀತ ತೊಂದರೆ ಆಗುತ್ತಿರುವುದರಿಂದ ಕೂಡಲೇ ನೂತನ ಕಿರುಸೇತುವೆ ನಿರ್ಮಾಣ ಮಾಡುವಂತೆ ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

CLICK ಮಾಡಿ - ನೆಲ್ಲುಂಡೆ-ಬಾಳೇದೋಣಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಕ್ರಮ : ರಾಮಚಂದ್ರಪುರ ಗ್ರಾ.ಪಂ. ಅಧ್ಯಕ್ಷ ಕಣಿವೆಬಾಗಿಲು ಸುಬ್ರಹ್ಮಣ್ಯ ಸ್ಪಷ್ಟನೆ

ನೆಲ್ಲುಂಡೆ ಗ್ರಾಮದ ಎನ್.ಆರ್. ಸುರೇಶ್ ಎನ್ನುವವರ ಮನೆಯ ಸಮೀಪ ಇರುವ ಕಿರುಸೇತುವೆ ಕುಸಿದು ಹಲವು ವರ್ಷಗಳೇ ಕಳೆದಿವೆ. ಆ ಭಾಗದ ಪರಿಶಿಷ್ಟ ಜಾತಿ-ಪಂಗಡದ ಕಾಲೋನಿ ಸಂಪರ್ಕ ಸಾಧಿಸುವ ಈ ಮಾರ್ಗದಲ್ಲಿ ಕಾಲೋನಿಯ ಅನೇಕ ವಿದ್ಯಾರ್ಥಿಗಳು ನೆಲ್ಲುಂಡೆ ಸರ್ಕಾರಿ ಶಾಲೆ ತಲುಪಲು ಇದೇ ಸಮೀಪದ ಏಕೈಕ ಮಾರ್ಗವಾಗಿರುವುದರಿಂದ ಈ ಕಿರುಸೇತುವೆ ಮೂಲಕವೇ ಹಾದು ಹೋಗಬೇಕಿದೆ. ಅಲ್ಲದೇ, ಈ ಕಿರುಸೇತುವೆಯ ಮೂಲಕವೇ ಆ ಭಾಗದ ಕೆಲವು ಕೃಷಿಕರು ತಮ್ಮ ನಿತ್ಯದ ಕೃಷಿ ಚಟುವಟಿಕೆಗಳಿಗೆ ಬೇಕಾದ ಎಲ್ಲಾ ಪರಿಕರಗಳನ್ನು ಸಾಗಿಸಬೇಕಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ಈ ಸೇತುವೆಯ ಇಕ್ಕೆಲಗಳ ತಡೆಗೋಡೆ ಕುಸಿದು ಬಿದ್ದಿದ್ದು, ಮುಂದೆ ಭಾರೀ ಅವಘಡ ಸಂಭವಿಸಲು ಕಾರಣವಾಗಲಿದೆ ಎಂದು ಗ್ರಾಮಸ್ಥರು ಆತಂಕದಿಂದ ಹೇಳುತ್ತಾರೆ.

ಹಲವು ಬಾರಿ ಪಂಚಾಯ್ತಿಯ ಗ್ರಾಮಸಭೆಗಳಲ್ಲಿ ಸುಮಾರು 10X15 ಉದ್ದಗಲ ವಿಸ್ತೀಣದ ಈ ಕಿರುಸೇತುವೆ ಮರುನಿರ್ಮಾಣ ಕುರಿತಂತೆ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದೂ ಜನರು ದೂರುತ್ತಾರೆ. ಮಳೆ ಹೀಗೆ ಮುಂದುವರೆದಲ್ಲಿ ಸೇತುವೆ ಸಂಪೂರ್ಣ ಕುಸಿದು ಬೀಳುವ ಆತಂಕವನ್ನು ಗ್ರಾಮಸ್ಥರು ವ್ಯಕ್ತ ಪಡಿಸಿದ್ದು, ಶಾಸಕ ಆರಗ ಜ್ಞಾನೇಂದ್ರ ಕೂಡಲೇ ನೂತನ ಕಿರುಸೇತುವೆ ನಿರ್ಮಾಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಾಮೆಂಟ್‌ಗಳಿಲ್ಲ