ಹೊಸನಗರ ತಾಲ್ಲೂಕಿನಲ್ಲಿ ಮತ್ತೆ ಚುರುಕುಗೊಂಡ ಪುಷ್ಯ ಮಳೆ - 1799 ಅಡಿ ತಲುಪಿದ ಲಿಂಗನಮಕ್ಕಿ ಜಲಾಶಯ - ಹುಲಿಕಲ್ಲಿನಲ್ಲಿ ಅತ್ಯಧಿಕ 98 ಮಿಲಿಮೀಟರ್ ಮಳೆ
ಹೊಸನಗರ : ತಾಲ್ಲೂಕಿನೆಲ್ಲೆಡೆ ಕಳೆದೆರಡು ದಿನಗಳಿಂದ ಕ್ಷೀಣಿಸಿದ್ದ ಪುಷ್ಯ ಮಳೆ ಇಂದು ಬೆಳಿಗ್ಗೆಯಿಂದ ಚುರುಕುಗೊಂಡಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ ಒಂದೂವರೆ ಅಡಿಗಳಷ್ಟು ನೀರು ಹರಿದು ಬಂದಿದ್ದು, ಜಲಾಶಯದ ನೀರಿನ ಮಟ್ಟ 1799 ಅಡಿ ತಲುಪಿದ್ದು, ಕಳೆದ ವರ್ಷಕ್ಕಿಂತ ಸುಮಾರು 30 ಅಡಿಗಳಷ್ಟು ಹೆಚ್ಚಿನ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಜಲಾಶಯಕ್ಕೆ 41269 ಕ್ಯುಸೆಕ್ಸ್ ನೀರು ಹರಿದು ಬರುತ್ತಿದೆ.
ಮಂಗಳವಾರ ಬೆಳಿಗ್ಗೆ ಎಂಟು ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ಹುಲಿಕಲ್ಲಿನಲ್ಲಿ 98 ಮಿಲಿಮೀಟರ್, ನಗರದಲ್ಲಿ 92 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 87 ಮಿ.ಮೀ, ಚಕ್ರಾನಗರದಲ್ಲಿ 76 ಮಿ.ಮೀ, ಯಡೂರಿನಲ್ಲಿ 71 ಮಿ.ಮೀ, ಕಾರ್ಗಲ್‌ನಲ್ಲಿ 62.4 ಮಿ.ಮೀ, ಸಾವೇಹಕ್ಲಿನಲ್ಲಿ 60 ಮಿ.ಮೀ, ಮಾಣಿಯಲ್ಲಿ 55 ಮಿ.ಮೀ, ರಿಪ್ಪನ್‌ಪೇಟೆಯಲ್ಲಿ 20 ಮಿ.ಮೀ, ಹೊಸನಗರ ಪಟ್ಟಣದಲ್ಲಿ 19 ಮಿ.ಮೀ, ಅರಸಾಳಿನಲ್ಲಿ 15 ಮಿ.ಮೀ ಮಳೆ ದಾಖಲಾಗಿದೆ.
CLICK - ಹೆದ್ದಾರಿಪುರ ವಡಾಹೊಸಳ್ಳಿಯಲ್ಲಿ ಹಳ್ಳದ ದಂಡೆ ಒಡೆದು ಅಡಿಕೆ ತೋಟಕ್ಕೆ ಹಾನಿ
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯ ಇಂದು ಬೆಳಿಗ್ಗೆ ಎಂಟು ಗಂಟೆಗೆ ಶೇಕಡಾ 61.66ರಷ್ಟು ಭರ್ತಿಯಾಗಿದ್ದು, ಜಲಾನಯನ ಪ್ರದೇಶದಲ್ಲಿ ಇಂದು ಬೆಳಿಗ್ಗೆಯಿಂದ ಮಳೆಯಾಗುತ್ತಿರುವ ಕಾರಣ ಇಂದು ಸಂಜೆಯೊಳಗೆ ಜಲಾಶಯ 1800 ಅಡಿ ದಾಟುವ ನಿರೀಕ್ಷೆ ಇದೆ.
ಕಾಮೆಂಟ್‌ಗಳಿಲ್ಲ