Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೆದ್ದಾರಿಪುರ ವಡಾಹೊಸಳ್ಳಿಯಲ್ಲಿ ಹಳ್ಳದ ದಂಡೆ ಒಡೆದು ಅಡಿಕೆ ತೋಟಕ್ಕೆ ಹಾನಿ

ಹೊಸನಗರ : ಇತ್ತೀಚೆಗೆ ಸುರಿದ ಭಾರೀ ಮಳೆಯ ಪರಿಣಾಮ ಹಳ್ಳದ ದಂಡೆ ಒಡೆದು ತೋಟಕ್ಕೆ ನೀರು ನುಗ್ಗಿದ ಪರಿಣಾಮ ಅಪಾರ ನಷ್ಟವುಂಟಾದ ಘಟನೆ ತಾಲ್ಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡಾಹೊಸಳ್ಳಿ ಗ್ರಾಮದ ಸರ್ವೆ ನಂಬರ್ 41ರ ಕೃಷಿಕ ಕಮಲಾಕ್ಷ ಬಿನ್ ಅಯ್ಯಣ್ಣ ನಾಯ್ಕ ಎನ್ನುವವರ ಕೃಷಿ ಜಮೀನಿಗೆ ಇತ್ತೀಚೆಗೆ ಸುರಿದ ಭಾರೀ ಮಳೆಯ ನೀರು ಉಕ್ಕಿ ಹರಿದ ಪರಿಣಾಮ ಹಳ್ಳದ ದಂಡೆ ಒಡೆದು ತೋಟಕ್ಕೆ ನುಗ್ಗಿ, ನೂರಾರು ಅಡಿಕೆ ಸಸಿಗಳಿಗೆ ಹಾನಿಯಾಗಿ ನಷ್ಟ ಉಂಟಾಗಿದೆ.

ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಶ್ರೀವಲ್ಲಿ, ಗ್ರಾಮ ಸಹಾಯಕ ರಘು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ