Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಮಳೆ ಪರಿಣಾಮ ಭಾಗಶಃ ಕುಸಿದು ಬಿದ್ದ ಕೊಡಚಾದ್ರಿ ಬೆಟ್ಟ ದೇಗುಲದ ಅರ್ಚಕರ ಮನೆ

ಹೊಸನಗರ: ತಾಲ್ಲೂಕಿನಲ್ಲಿ ಇತ್ತೀಚೆಗೆ ನಿರಂತರವಾಗಿ ಸುರಿದ ಭಾರೀ ಮಳೆಗೆ ತಾಲ್ಲೂಕಿನ ಸಂಪೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜ್ಯದ ಪ್ರಸಿದ್ಧ ಗಿರಿಧಾಮಗಳಲ್ಲಿ ಒಂದಾದ ಕೊಡಚಾದ್ರಿ ಬೆಟ್ಟದ ಮೇಲಿನ ದೇಗುಲದ ಅರ್ಚಕರ ಮನೆಯು ಭಾಗಶಃ ಕುಸಿದು ಬಿದ್ದು ಅಪಾರ ನಷ್ಟವಾಗಿದೆ.

ಕೊಡಚಾದ್ರಿ ಬೆಟ್ಟದ ಮೇಲಿನ ಶ್ರೀ ಸಿದ್ದೇಶ್ವರ ಹುಲಿರಾಯ, ಕಾಲಭೈರವ ಹಾಗೂ ಅಮ್ಮನವರ ದೇವಾಲಯದ ಅರ್ಚಕರಾದ ನಾಗೇಶ ಮತ್ತು ನಾಗೇಂದ್ರ ಜೋಗಿ ಅವರಿಗೆ ಸೇರಿದ ವಾಸದ ಮನೆ ಮಳೆ ಗಾಳಿಯಿಂದ ಕುಸಿದಿದ್ದು, ವಾಸಿಸಲು ಯೋಗ್ಯವಿಲ್ಲದಂತಾಗಿದೆ.

ಶಿಥಿಲಗೊಂಡಿವೆ ನಗರ ನೂಲಿಗ್ಗೇರಿ ಶಾಲಾ ಕಟ್ಟಡದ ಕೊಠಡಿಗಳು - ಶಿಕ್ಷಕರ ಕೊಠಡಿ ಮಧ್ಯೆಯೇ ನಡೆಯುತ್ತಿದೆ ಮಕ್ಕಳಿಗೆ ಪಾಠ

ಈ ದೇಗುಲವು ಮುಜರಾಯಿ ಇಲಾಖೆ ಆಡಳಿತಕ್ಕೆ ಒಳಪಟ್ಟಿದ್ದು, ಕೂಡಲೇ ಸೂಕ್ತ ಪರಿಹಾರ ನೀಡಿ ಮನೆ ದುರಸ್ತಿ ಮಾಡಿಕೊಳ್ಳಲು ನೆರವಾಗುವಂತೆ ಅರ್ಚಕರ ಕುಟುಂಬ ವರ್ಗ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಕಾಮೆಂಟ್‌ಗಳಿಲ್ಲ