ನಿಧನ ವಾರ್ತೆ : ಹೊಸನಗರ ಚರ್ಚ್ ರಸ್ತೆಯ ಜೆ. ಬಿ. ಸೆರಾವೋ
ಹೊಸನಗರ : ಇಲ್ಲಿನ ಚರ್ಚ್ ರಸ್ತೆಯ ನಿವಾಸಿಯಾಗಿದ್ದು, ಇದೀಗ ಕೆಲ ವರ್ಷಗಳಿಂದ ಗುಳ್ಳೇಕೊಪ್ಪದ ತಮ್ಮ ಜಮೀನು ಬಳಿ ವಾಸವಾಗಿದ್ದ ಜೆ. ಬಿ. ಸೆರಾವೋ ನಿನ್ನೆ ರಾತ್ರಿ ಮಂಗಳೂರಿನಲ್ಲಿ ನಿಧನ ಹೊಂದಿದರು.
ಕಳೆದ ತಿಂಗಳು ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಕೂಡಲೇ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ರಾತ್ರಿ ಜೆ. ಬಿ. ಸೆರಾವೋ ಅವರು ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
CLICK ಮಾಡಿ - ಜಯನಗರದ ಶ್ರೀಮತಿ ಸೀತಮ್ಮ ರಾಮಚಂದ್ರ ರಾವ್ ಇನ್ನಿಲ್ಲ
ಮೃತರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಂದು ಸಂಜೆ ಅವರ ಅಂತ್ಯಕ್ರಿಯೆ ನೆರವೇರಿತು.
ಕಾಮೆಂಟ್‌ಗಳಿಲ್ಲ