ಜಯನಗರದ ಶ್ರೀಮತಿ ಸೀತಮ್ಮ ರಾಮಚಂದ್ರ ರಾವ್ ಇನ್ನಿಲ್ಲ
ಹೊಸನಗರ : ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ಜಯನಗರ ವಾಸಿ ಶ್ರೀಮತಿ ಸೀತಮ್ಮ ರಾಮಚಂದ್ರ ರಾವ್ (86) ವಯೋಸಹಜ ಕಾರಣಗಳಿಂದ ಇಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಇಹಲೋಕ ತ್ಯಜಿಸಿದರು.
ಮೃತರು ಪುತ್ರರಾದ ಹೊಸನಗರ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷ ಕೆ.ಆರ್. ಗೋಪಿನಾಥ್ ಹಾಗೂ ಜಯನಗರ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಕೆ.ಆರ್. ವಿಶ್ವನಾಥ್ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ : ಶ್ರೀಮತಿ ಸೀತಮ್ಮನವರ ನಿಧನಕ್ಕೆ ಸಾಗರ ಹೊಸನಗರ ಕ್ಷೇತ್ರದ ಶಾಸಕರು, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಹಾಗೂ ಅವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಜಿಲ್ಲಾ ಬಿಜೆಪಿ ಮುಖಂಡ ಎನ್. ಆರ್. ದೇವಾನಂದ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಬಿ. ಆರ್. ಪ್ರಭಾಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳಿಲ್ಲ