Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಕೊಲ್ಲೂರು ಹೆದ್ದಾರಿ ಎಬಗೋಡು ಬಳಿ ಶಿವಲಿಂಗದ ಪಕ್ಕದಲ್ಲಿ ನಿಧಿಗಾಗಿ 4 ಅಡಿಯ ಗುಂಡಿ ತೋಡಿದರೇ ನಿಧಿಗಳ್ಳರು?!

ಹೊಸನಗರ : ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಕೊಲ್ಲೂರು ಮಾರ್ಗದ ಎಬಗೋಡು ಬಳಿ ಹೆದ್ದಾರಿ ಪಕ್ಕದಲ್ಲೇ ನಿಧಿಯಾಸೆಯಾಗಿ ಗುಂಡಿ ತೋಡಿದ ಘಟನೆ ನಿನ್ನೆ ಬೆಳಿಗ್ಗೆ ಬೆಳಕಿಗೆ ಬಂದಿದೆ.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

ಎಬಗೋಡು ಹೆದ್ದಾರಿಗೆ ತಾಗಿಕೊಂಡಂತಿರುವ ಧರೆಯ ಮೇಲ್ಭಾಗದಲ್ಲಿ ಶಿವಲಿಂಗದ ಕೆತ್ತನೆ ಇರುವ ಕಲ್ಲಿದ್ದು, ಅದರ ಪಕ್ಕದಲ್ಲೇ ಗುಂಡಿ ತೋಡಲಾಗಿದೆ. ಶಿವಲಿಂಗ ಕಲ್ಲಿಗೆ ಅರಿಶಿಣ, ಕುಂಕುಮ ಹಚ್ಚಲಾಗಿದೆ. ಪಕ್ಕದ ಬೃಹತ್ ಮರದ ಪೊಟರೆಯೊಳಗೆ ಹೂವಿನ ಹಾರ ಕೂಡಾ ಕಂಡು ಬಂದಿದೆ. ಇನ್ನು ಶಿವಲಿಂಗದ ಪಕ್ಕದಲ್ಲಿ ತೋಡಿರುವ ಗುಂಡಿಯ ಸುತ್ತಲೂ ಅಲ್ಲಲ್ಲಿ ಲಿಂಬೆಹಣ್ಣು ಎಸೆಯಲಾಗಿದ್ದು, ನಿಧಿಯಾಸೆಗೆ ಈ ಕೃತ್ಯ ನಡೆದಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.


ರಾಷ್ಟ್ರೀಯ ಹೆದ್ದಾರಿಯಿಂದ ಹೆಚ್ಚೆಂದರೆ 10-20 ಅಡಿ ಅಂತರದಲ್ಲಿ ಈ ಕೃತ್ಯ ಎಸಗಲಾಗಿದೆ. ಎರಡು ವರ್ಷದ ಹಿಂದೆ ಪಕ್ಕದ ಶ್ರೀಧರ ಗುಡ್ಡದ ಮೇಲ್ಭಾಗದಲ್ಲಿರುವ ಶಿವಲಿಂಗದ ಕೆತ್ತನೆ ಇರುವ ಕಲ್ಲಿನ ಪಕ್ಕದಲ್ಲಿಯೂ ಕೂಡಾ ಇದೇ ರೀತಿಯ ಕೃತ್ಯ ನಡೆದಿತ್ತು.

CLICK ಮಾಡಿ - ಹೊಸನಗರ ಸೂಡೂರು ಗೇಟ್ ಬಳಿ ಕಾರು-ಬೈಕ್ ನಡುವೆ ಅಪಘಾತ

ನಗರ ಭಾಗದಲ್ಲಿ ಹಲವು ವರ್ಷಗಳಿಂದ ನಿಧಿಗಾಗಿ ಶೋಧ ನಡೆಸುವ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಸಮಾಧಿ ಸ್ಥಳ, ಗಳಿಗೆ ಬಟ್ಟಲು, ಬರೇಕಲ್ ಬತೇರಿ, ಅರೋಡಿ, ಬಸವನಬ್ಯಾಣ, ದರಗಲ್ ಗುಡ್ಡ ಸೇರಿದಂತೆ ಇತಿಹಾಸ ಮಹತ್ವದ ಸ್ಥಳಗಳನ್ನು ಕೂಡ ನಿಧಿಯಾಸೆಗಾಗಿ ಲೂಟಿಕೂರರು ಈ ಹಿಂದೆ ಧ್ವಂಸಗೊಳಿಸಿದ್ದರು.

ಕಾಮೆಂಟ್‌ಗಳಿಲ್ಲ