ಹೊಸನಗರ ಸೂಡೂರು ಗೇಟ್ ಬಳಿ ಕಾರು-ಬೈಕ್ ನಡುವೆ ಅಪಘಾತ
ಹೊಸನಗರ : ತಾಲ್ಲೂಕಿನ ಸೂಡೂರು ಗೇಟ್ ಬಳಿ ಕಾರು (KA-53 M 8907) ಮತ್ತು ಬೈಕ್ (KA-15 EA 5150) ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕಿನಲ್ಲಿದ್ದ ಮೂವರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ 4 ಗಂಟೆ ಸುಮಾರಿಗೆ ನಡೆದಿದೆ.
ರಿಪ್ಪನ್‌ಪೇಟೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಮಾರುತಿ ಆಲ್ಟೋ ಕಾರು ಹಾಗೂ ಶಿವಮೊಗ್ಗದ ಕಡೆಯಿಂದ ರಿಪ್ಪನ್‌ಪೇಟೆಗೆ ಸಾಗುತ್ತಿದ್ದ ಬೈಕಿನ ನಡುವೆ ಢಿಕ್ಕಿ ಸಂಭವಿಸಿದ್ದು, ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.
ಮೃತಪಟ್ಟ ಯುವಕನನ್ನು ಕಳಸ ಗ್ರಾಮದ ಮನೋಜ್ ಎಂದು ಗುರುತಿಸಲಾಗಿದೆ. ಬೈಕಿನಲ್ಲಿದ್ದ ಕೆಂಚನಾಲ ಗ್ರಾಮದ ಅಕ್ಷಯ್ ಎಂಬ ಯುವಕನಿಗೆ ಕಾಲು ಮುರಿತವಾಗಿದ್ದು ಸ್ಥಿತಿ ಗಂಭೀರವಾಗಿದೆ. ಇನ್ನೊಬ್ಬ ಬೈಕ್ ಸವಾರ ರಿಪ್ಪನ್‌ಪೇಟೆ ನಿವಾಸಿ ಮನ್ವಿತ್ ಭಂಡಾರಿಗೆ ಕಾಲು ಮುರಿದಿದ್ದು, ಮನ್ವಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಕಾಮೆಂಟ್‌ಗಳಿಲ್ಲ