Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಕುವೆಂಪು ವಿವಿ ಸಹ್ಯಾದ್ರಿ ಉತ್ಸವ - ಹೊಸನಗರದ ಕೊಡಚಾದ್ರಿ ಕಾಲೇಜು ತಂಡಕ್ಕೆ ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನ

ಹೊಸನಗರ : ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ’ಸಹ್ಯಾದ್ರಿ ಉತ್ಸವ’ದಲ್ಲಿ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಜಾನಪದ ನೃತ್ಯ ವಿಭಾಗದಲ್ಲಿ ಕೋಲಾಟವನ್ನು ಪ್ರದರ್ಶಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ ಕಾಲೇಜಿನ ಸಾಂಸ್ಕೃತಿಕ ವಿಭಾಗಕ್ಕೆ ಹೊಸ ಗರಿ ಮೂಡಿಸಿದ್ದಾರೆ.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

ಜಾನಪದ ನೃತ್ಯ -  ಪ್ರಥಮ (ಕೋಲಾಟ ತಂಡ), ಶಾಸ್ತ್ರೀಯ ಸಂಗೀತ - ತೃತೀಯ (ನಿಸರ್ಗ ಸಿ. - ತೃತೀಯ ಬಿ.ಬಿ.ಎ)

ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಶ್ರೀಮತಿ ಪ್ರತಿಮಾ, ಸದಸ್ಯರಾದ ಶ್ರೀಮತಿ ಮೇದಿನಿ ಕೆ.ಎಸ್, ಶ್ರೀಮತಿ ದೀಪಾ ಕೆ, ಶ್ರೀ ಮಧು ನಾಯ್ಕ್ ಜಿ.ಜಿ ಅವರ ಮಾರ್ಗದರ್ಶನದಿಂದ ಸಹ್ಯಾದ್ರಿ ಉತ್ಸವದ ಎಲ್ಲಾ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದು, ಕಾಲೇಜಿನ ಪ್ರಾಂಶುಪಾಲರಾದ ಡಾ. ಉಮೇಶ್ ಕೆ, ಬೋಧಕ ಮತ್ತು ಬೋಧಕೇತರ ವೃಂದ ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿಯು ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದೆ.


ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಒಂದು ದಿನದ ಕಾರ್ಯಾಗಾರ

ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಪದವಿಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ನಿನ್ನೆ ಯಶಸ್ವಿಯಾಗಿ ನಡೆಸಿಕೊಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಿನ್ಸಿಪಾಲರಾದ ಡಾ. ಶ್ರೀಪತಿ ಕೆ. ವಹಿಸಿದ್ದರು, ಸಂಪನ್ಮೂಲ ವ್ಯಕ್ತಿಗಳಾಗಿ ಮೋಹನ್ ಕುಮಾರ್ ಎಂ, ಮತ್ತು ಮಲ್ಲಿಕಾರ್ಜುನ ಎ.ಹೆಚ್, ಸ್ಪರ್ಧಾ ಕರ್ನಾಟಕ ಅಕಾಡೆಮಿ, ಶಿವಮೊಗ್ಗ ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸಾಕಷ್ಟು ಮಾಹಿತಿ - ಮಾರ್ಗದರ್ಶನವುಳ್ಳ ಉಪನ್ಯಾಸ ನೀಡಿದರು.

CLICK ಮಾಡಿ - ಹೊಸನಗರ ಸೂಡೂರು ಗೇಟ್ ಬಳಿ ಕಾರು-ಬೈಕ್ ನಡುವೆ ಅಪಘಾತ

ಡಾ. ಬಸವರಾಜಪ್ಪ ಎಂ ಟಿ, ಸಂಚಾಲಕರು, ಪ್ಲೇಸ್ಮೆಂಟ್ ಸೆಲ್ ಮತ್ತು ಪ್ರೇರಣಾ ಸೆಲ್ ಇವರು ಕಾರ್ಯಕ್ರಮದ ಆಯೋಜನೆ ಮಾಡಿದ್ದರು.  ಈ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಮಂಜುನಾಥ. ಡಿ, ಹಾಗೂ ಶಾಲಿನಿ ಬಿ ಎನ್, ಗೌತಮ್ ಎಸ್, ರಾಕೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಂದಾರ.ಟಿ ಕಾರ್ಯಕ್ರಮ ನಿರೂಪಿಸಿದರು, ಸುವೀಕ್ಷ ಸ್ವಾಗತಿಸಿದರು, ಕನ್ನಿಕಾ ವಂದಿಸಿದರು.

ಕಾಮೆಂಟ್‌ಗಳಿಲ್ಲ