ಕಾರಗಡಿಯಲ್ಲಿ ರಸ್ತೆ ಅಪಘಾತ - ನಾಗರಕೊಡಿಗೆ ಮಹೇಶ ಗೌಡ ನಿಧನ
ಹೊಸನಗರ : ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿ ಗೊರಗೋಡಿನ ದಿವಂಗತ ಗಂಗಾಧರಪ್ಪ ಗೌಡರ ಪುತ್ರ ಮಹೇಶ ಗೌಡ (56 ) ನಿನ್ನೆ ಸಂಜೆ ಕಾರಗಡಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಅಡಿಕೆ ಕೊಯ್ಲಿನ ಸಂದರ್ಭವಾದ್ದರಿಂದ ಕೊಯ್ಲುಗತ್ತಿ ರಿಪೇರಿ ಮಾಡಿಸಿಕೊಂಡು ಬೈಕಿನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದಾಗ ಜಾನುವಾರು ಅಡ್ಡ ಬಂದು ನಿಯಂತ್ರಣ ತಪ್ಪಿ, ಢಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಹೊಸನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾಗಿ ವರದಿಯಾಗಿದೆ.
CLICK ಮಾಡಿ - ಹೊಸನಗರ ಸೂಡೂರು ಗೇಟ್ ಬಳಿ ಕಾರು-ಬೈಕ್ ನಡುವೆ ಅಪಘಾತ
ಮಹೇಶ ಗೌಡ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ, ಸ್ನೇಹಿತರನ್ನು ಅಗಲಿದ್ದಾರೆ.
ಕಾಮೆಂಟ್‌ಗಳಿಲ್ಲ