ಹೊಸನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನೂತನ ಅಧ್ಯಕ್ಷರಾಗಿ ನಾಗರಕೊಡಿಗೆ ಗಣೇಶ ಮೂರ್ತಿ ಅವಿರೋಧ ಆಯ್ಕೆ
ಹೊಸನಗರ : ಇಂದು ಪಟ್ಟಣದ ಶ್ರೀರಾಮ ಕಾಂಪ್ಲೆಕ್ಸಿನಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ್ ಅವರು, ಚರ್ಚೆಯ ಬಳಿಕ ನೂತನ ಅಧ್ಯಕ್ಷರಾಗಿ ನಾಗರಕೊಡಿಗೆ ಗಣೇಶಮೂರ್ತಿ ಅವರ ಹೆಸರನ್ನು ಪ್ರಕಟಿಸಿದರು. ಈ ಮೂಲಕ ನಾಗರಕೊಡಿಗೆ ಗಣೇಶಮೂರ್ತಿ ಅವರು ತಾಲ್ಲೂಕು ಕಸಾಪದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಈ ಸಭೆಯಲ್ಲಿ ಹಿರಿಯ ಚಿಂತಕರು, ಸಾಹಿತ್ಯ ಅಭಿಮಾನಿಗಳು, ಲೇಖಕರಾದ ಡಾ. ಶಾಂತರಾಮ ಪ್ರಭು, ಡಾ. ಶ್ರೀಪತಿ ಹಳಗುಂದ, ನಿಕಟಪೂರ್ವ ಅಧ್ಯಕ್ಷರುಗಳಾದ ತ.ಮ. ನರಸಿಂಹ, ಕೆ. ಇಲಿಯಾಸ್, ಮಾರ್ಷಲ್ ಶರಾಂ, ಕೆ.ಕೆ. ಅಶ್ವಿನಿ ಕುಮಾರ್, ಮಂಜುನಾಥ ಕಾಮತ್, ಎಂ.ಕೆ. ವೆಂಕಟೇಶಮೂರ್ತಿ, ಕೆ. ಜಿ. ನಾಗೇಶ್, ಕುಬೇಂದ್ರಪ್ಪ, ಜಿ. ಎನ್. ಬಸಪ್ಪಗೌಡ, ಎನ್. ವಿಜೇಂದ್ರ ಶೇಟ್, ಎಸ್. ಹೆಚ್. ನಿಂಗಮೂರ್ತಿ, ಎಸ್. ಎನ್. ರಾಜಮೂರ್ತಿ, ಎನ್.ವಿ. ಲಲಿತಾ, ಕೆ. ಸುರೇಶ್ ಕುಮಾರ್, ಗರ್ತಿಕೆರೆ ಬಶೀರ್ ಸಾಬ್, ನಗರ ರಾಘವೇಂದ್ರ, ವಾಸಪ್ಪಗೌಡ, ಈಶ್ವರಪ್ಪ ಗೌಡ, ನವೀನ್ ಕುಮಾರ್, ಪ್ರಶಾಂತ ಮೊದಲಾದವರು ಉಪಸ್ಥಿತರಿದ್ದು ಸೂಕ್ತ ಸಲಹೆ ಹಾಗೂ ಮಾಹಿತಿ ನೀಡಿದರು.
ಈ ಹಿಂದಿನ ಅವಧಿಯಲ್ಲಿ ರಿಪ್ಪನ್‌ಪೇಟೆಯ ತ.ಮ. ನರಸಿಂಹ ಅವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕಾಮೆಂಟ್‌ಗಳಿಲ್ಲ