ಹೊಸನಗರ ತಾಲ್ಲೂಕಿನೆಲ್ಲೆಡೆ ಸಡಗರ ಸಂಭ್ರಮದ ಭೂಮಿ ಹುಣ್ಣಿಮೆ ಹಬ್ಬ - ಬಿಡುವು ಕೊಟ್ಟು ಹಬ್ಬದ ಸಂಭ್ರಮ ಹೆಚ್ಚಿಸಿದ ಮಳೆರಾಯ
ಹೊಸನಗರ : ತಾಲ್ಲೂಕಿನೆಲ್ಲೆಡೆ ಇಂದು ರೈತರು ಸಡಗರ ಸಂಭ್ರಮದಿಂದ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸಿದರು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಭೂಮಿ ಹುಣ್ಣಿಮೆ ಹಬ್ಬ ಎಂದರೆ ರೈತ ಬಂಧುಗಳಿಗೆ ಎಲ್ಲಿಲ್ಲದ ಸಂಭ್ರಮ ಸಡಗರ. ಭೂಮಿ ತಾಯಿ ಗರ್ಭಿಣಿಯಾಗಿದ್ದಾಳೆ, ಈ ತಾಯಿಗೆ ಸೀಮಂತ ಮಾಡಬೇಕು ಎಂಬ ನಂಬಿಕೆಯಿಂದ ಭೂಮಿ ಹುಣ್ಣಿಮೆ ಹಬ್ಬವನ್ನು ಮಲೆನಾಡಿಗರು ಆಚರಿಸಿಕೊಂಡು ಬರುತ್ತಿದ್ದಾರೆ.
ತಾಲ್ಲೂಕಿನ ಹೆಚ್ಚಿನ ಭಾಗಗಳಲ್ಲಿ ಬುಧವಾರ ರಾತ್ರಿಯವರೆಗೂ ಮಳೆ ಒಂದೇ ಸಮನೆ ಸುರಿಯುತ್ತಿದ್ದರೂ, ಆನಂತರ ಬಿಡುವು ನೀಡಿದ ಕಾರಣ ರೈತರಿಗೆ ಹಬ್ಬಕ್ಕೆ ಸಂಭ್ರಮದಿಂದ ಸಜ್ಜಾಗಲು ಸಾಧ್ಯವಾಯಿತು.
ಹಸಿರಾಗಿ ಸಮೃದ್ಧತೆಯಿಂದ ಕಂಗೊಳಿಸುವ ಭೂತಾಯಿಗಾಗಿ 101 ಬಗೆಯ ಸೊಪ್ಪುಗಳನ್ನು ಸಂಗ್ರಹಿಸಿ, ರಾತ್ರಿ ಇಡೀ ಜಾಗರಣೆ ಮಾಡಿ, ಸಂಗ್ರಹಿಸಿದ ಸೊಪ್ಪಿನಿಂದ ಬೆರಕೆ ಪಲ್ಯ ತಯಾರಿಸಿ, ಹಲವು ಬಗೆಯ ತರಕಾರಿಗಳಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ, ಸೊಪ್ಪಿನ ಪಲ್ಯ ಸೇರಿಸಿ, ಹಚ್ಚಂಬಲಿ ತಯಾರಿಸಿ, ಭೂಮಣ್ಣಿ ಬುಟ್ಟಿಯಲ್ಲಿ ಇರಿಸಿಕೊಂಡು ಭೂಮಿ ತಾಯಿಯ ಪೂಜೆಯ ನಂತರ, ಹಚ್ಚಂಬಲಿ, ಹಾಲಂಬಲಿ, ಬೇಲಿ ಮೇಲಿರುವ ದಾರ ಹೀರೇಕಾಯಿ ಭೂಮಿ ತಾಯಿ ಊಟ ಮಾಡು ಎಂದು ಹಾಡುತ್ತಾ ಹಚ್ಚೊಂಬಲಿಯನ್ನು ಬೀರುವ ದೃಶ್ಯ ಹಬ್ಬದ ಸಂಭ್ರಮಕ್ಕೆ ಮೆರುಗು ನೀಡುತ್ತದೆ.
ಕಾಮೆಂಟ್‌ಗಳಿಲ್ಲ