Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ತಾಲ್ಲೂಕಿನ ಯುವ ಕವಿಗಳಿಗೆ ಇಲ್ಲಿದೆ ಅಪರೂಪದ ಅವಕಾಶ - ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸುತ್ತಿದೆ ಯುವ ಕವಿಗೋಷ್ಠಿ

ಹೊಸನಗರ : ಕರ್ನಾಟಕ ಸಾಹಿತ್ಯ ಅಕಾಡೆಮಿಯು ’ಯುವ ಕವಿಗೋಷ್ಠಿ’ಗಾಗಿ 20 ರಿಂದ 40 ವರ್ಷ ವಯಸ್ಸಿನ ಯುವಕವಿಗಳಿಂದ ಕವಿತೆಗಳನ್ನು ಆಹ್ವಾನಿಸಿದೆ. ಕರ್ನಾಟಕ ಸಂಭ್ರಮ - 50ರ ಅಂಗವಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಈ ಕವಿಗೋಷ್ಠಿಯನ್ನು ಆಯೋಜಿಸುತ್ತಿದ್ದು, ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ 4 ವಿಭಾಗವಾರು ಯುವ ಕವಿಗೋಷ್ಠಿ ಇರುತ್ತದೆ. ಶಿವಮೊಗ್ಗ ಜಿಲ್ಲೆಯು ಬೆಂಗಳೂರು ವಲಯದಲ್ಲಿದ್ದು, ನಿಮ್ಮ ಕವಿತೆಗಳನ್ನು ಕಳುಹಿಸಲು 30 ಅಕ್ಟೋಬರ್ 2024 ಕೊನೆಯ ದಿನವಾಗಿದೆ. ಕೊನೆಯ ದಿನಾಂಕದ ನಂತರ ಬಂದ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಾಹಿತ್ಯ ಅಕಾಡೆಮಿ ಪ್ರಕಟಣೆ ತಿಳಿಸಿದೆ.

ಕವಿತೆಗಳನ್ನು ಕಳುಹಿಸಲು ಇರುವ ನಿಬಂಧನೆಗಳು : ಕನಿಷ್ಠ 20 ರಿಂದ 40 ವರ್ಷ ವಯಸ್ಸಿನವರು ಕವಿತೆಗಳನ್ನು ಕಳಿಸಬಹುದು. ಕವಿತೆಗಳನ್ನು ಸಲ್ಲಿಸುವವರು ವಯಸ್ಸಿನ ದಾಖಲೆಯಾಗಿ ಎಸ್‌.ಎಸ್‌.ಎಲ್‌.ಸಿ ಅಂಕಪಟ್ಟಿಯ ನಕಲು ಪ್ರತಿಯನ್ನು ಸಲ್ಲಿಸಬೇಕು. ಕನಿಷ್ಠ 3 ಕವಿತೆಗಳನ್ನು ಅಕಾಡೆಮಿಗೆ ಕಳಿಸಬೇಕು. ಕವಿತೆಗಳೊಂದಿಗೆ ತಮ್ಮ ಹೆಸರು, ಸ್ಥಳ, ವಿದ್ಯಾರ್ಹತೆ, ದೂರವಾಣಿ ಸಂಖ್ಯೆ, ತಾವು ಪ್ರಕಟಿಸಿರುವ ಕವನ ಸಂಕಲನಗಳ ವಿವರಗಳನ್ನು ಕಳಿಸಬೇಕು. ಕವಿತೆಗಳನ್ನು ಸಲ್ಲಿಸುವ ಲಕೋಟೆಯ ಮೇಲ್ಭಾಗದಲ್ಲಿ ’ಬೆಂಗಳೂರು ವಲಯ’ ವಿಭಾಗದ ’ಯುವ ಕವಿಗೋಷ್ಠಿ’ ಎಂದು ನಮೂದಿಸಬೇಕು. ಆಯಾ ವಿಭಾಗದ ಕವಿಗಳಿಗೆ ಆಯಾ ವಿಭಾಗದಲ್ಲಿ ಮಾತ್ರ ಕವಿತೆಗಳನ್ನು ವಾಚಿಸಲು ಅವಕಾಶ ನೀಡಲಾಗುವುದು. ಒಂದು ವಿಭಾಗದಲ್ಲಿ ಗರಿಷ್ಠ 15 ಕವಿಗಳಿಗೆ ಮಾತ್ರ ಅವಕಾಶವಿದ್ದು, ಕವಿಗಳ ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಹೆಚ್ಚಿನ ವಿವರಗಳನ್ನು ಅಕಾಡೆಮಿಯ ಜಾಲತಾಣ https://sahithyaacademy.karnataka.gov.in/ ದಿಂದ ಮಾಹಿತಿಯನ್ನು ಪಡೆಯಬಹುದಾಗಿದೆ.

ವಲಯಗಳು ಈ ಕೆಳಕಂಡಂತಿವೆ

1. ಬೆಂಗಳೂರು ವಲಯ : ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು.

2. ಮೈಸೂರು ವಲಯ : ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ.

3. ಕಲಬುರಗಿ ವಲಯ : ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ವಿಜಯನಗರ.

4. ಬೆಳಗಾವಿ ವಲಯ : ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ.


ಕಾಮೆಂಟ್‌ಗಳಿಲ್ಲ