Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕೃಷಿಕ್ ಸರ್ವೋದಯ ಫೌಂಡೇಶನ್‌ ವಿದ್ಯಾರ್ಥಿ ವೇತನ

ಹೊಸನಗರ : ಕೃಷಿಕ್‌ ಸರ್ವೋದಯ ಫೌಂಡೇಶನ್‌ ವತಿಯಿಂದ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪಿಯು, ಪದವಿ, ವೃತ್ತಿಪರ ಪದವಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ವಿದ್ಯಾಭ್ಯಾಸ ಮುಂದುವರಿಸಲು ಆಸಕ್ತ ಇರುವ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಇದೇ ನವೆಂಬರ್ 30ರೊಳಗೆ ಅರ್ಜಿ ಸಲ್ಲಿಸಬಹುದು. ಕೃಷಿಕ್ ಸರ್ವೋದಯ ಫೌಂಡೇಶನ್ನಿನ https://www.ksfkarnataka.com/  ವೆಬ್‌ಸೈಟಿನಿಂದ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸುವ ಅರ್ಜಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ 080 -25202299, 99019 11410 ನಂಬರ‍್ರನ್ನು ಸಂಪರ್ಕಿಸಿ.

ವಿಳಾಸ : ಕೃಷಿಕ್‌ ಸರ್ವೋದಯ ಫೌಂಡೇಶನ್‌, ನಂ.15, ಎರಡನೇ ಮಹಡಿ, ಗಾಲ್ಫ್‌ ಅವೆನ್ಯೂ ರಸ್ತೆ, ಹೆಚ್‌ಎಎಲ್‌ ಹಳೇ ವಿಮಾನ ನಿಲ್ದಾಣ ರಸ್ತೆ, ಕೋಡಿಹಳ್ಳಿ, ಬೆಂಗಳೂರು - 560 008

ಕಾಮೆಂಟ್‌ಗಳಿಲ್ಲ