Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಸುಮೇಧಾ ಸೌಹಾರ್ದ ಸಹಕಾರಿ ಸಂಘದಿಂದ ಶೇ. 10 ಲಾಭಾಂಶ ಘೋಷಣೆ

ಹೊಸನಗರ: 2023-24ನೇ ಸಾಲಿನ ವಾರ್ಷಿಕ ವಹಿವಾಟು ಅಂತ್ಯಕ್ಕೆ ಸಂಘ ರೂ 28,39,716 ನಿವ್ವಳ ಲಾಭ ಗಳಿಸಿದ್ದು ತನ್ನ ಷೇರುದಾರರಿಗೆ ಶೇ.10 ಲಾಭಾಂಶ ನೀಡಿದೆ ಎಂದು ಸುಮೇಧಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ(ರಿ)ದ ಅಧ್ಯಕ್ಷ ಕೆ.ಆರ್. ಪ್ರದೀಪ್ ತಿಳಿಸಿದರು.

ಪಟ್ಟಣದ ಗಾಯತ್ರಿ ಮಂದಿರದಲ್ಲಿ ನಡೆದ ಸಂಘದ 12ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

CLICK ಮಾಡಿ - 'ಜೈಲುಗಳನ್ನು ಬೆತ್ತಲಾಗಿಸಿದ ದರ್ಶನ್‌‌ನ ಫೋಟೋ ಹೇಳಿದ ಹಸಿ ಸತ್ಯಗಳು...!!' - ’ಆಗಾಗ...’ ವಿಶೇಷ ಅಂಕಣ ಬರಹ

’ಸಹಕಾರಿ’ ಹೆಸರಿನಲ್ಲಿ ಈಗಾಗಲೇ ನೂತನ ಸುಸಜ್ಜಿತ ಗೋದಾಮಿನ ಕಟ್ಟಡ ನಿರ್ಮಾಣ ಹಂತದಲ್ಲಿದ್ದು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ರೈತರು ಸಂಘದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.

ಹಿರಿಯ ಲೆಕ್ಕಪರಿಶೋಧಕ ರವೀಂದ್ರನಾಥ್ ಮಾತನಾಡಿ, ಸಂಘವು ಪ್ರಗತಿಪಥದಲ್ಲಿದೆ. ಸದಸ್ಯರ ಸಲಹೆ ಸಹಕಾರ ಅತ್ಯಗತ್ಯವಾಗಿದೆ. ಸಹಕಾರಿ ಸಂಸ್ಥೆಗಳು ನಾಲ್ಕು ಕಾಲಿನ ಮಂಚವಿದ್ದಂತೆ. ಸಾಲಗಾರರು, ಠೇವಣಿದಾರರು, ಸದಸ್ಯರು, ಸಿಬ್ಬಂದಿಗಳು ಎಂಬ ನಾಲ್ಕು ವಿಭಾಗಗಳನ್ನು ಸರಿ ರೀತಿಯಲ್ಲಿ ಸಮತೋಲನದ ಮೂಲಕ ಸರಿದೂಗಿಸುವ ಹೊಣೆ ಆಡಳಿತ ಮಂಡಳಿ ಮೇಲಿದೆ. ಇತ್ತೀಚಿನ ದಿನಮಾನದಲ್ಲಿ ಜನರು ಸಾಮಾಜಿಕ ಜಾಲತಾಣ, ಜಂಕ್ ಫುಡ್, ಟಿವಿ, ಮೊಬೈಲ್, ಲ್ಯಾಪ್‌‌‌ಟಾಪ್ ಸೇರಿದಂತೆ ವಿವಿಧ ಪರದೆಗಳ ವ್ಯಸನಿಗಳಾಗುತ್ತಿದ್ದು ಇದು ಸಾಮಾಜಿಕ, ಭೌತಿಕ ಹಾಗೂ ಆರ್ಥಿಕ ಉತ್ಪಾದಕತೆಗೆ ಮಾರಕವಾಗಿ ಪರಿಣಮಿಸಿದೆ. ಯುವಜನತೆ ಇದರಿಂದ ಕೂಡಲೇ ಮುಕ್ತರಾದಲ್ಲಿ ಮಾತ್ರವೇ ಸದೃಢ ದೇಶ ನಿರ್ಮಾಣ ಸಾಧ್ಯವೆಂದರು.

ಉಪಾಧ್ಯಕ್ಷ ವಿ. ಅನಂತ ಮೂರ್ತಿ ಮಾತನಾಡಿ, ಸಂಸ್ಥೆಯು ತಾಲ್ಲೂಕು ಎಪಿಎಂಸಿ ವಹಿವಾಟಿನಲ್ಲಿ ನೂರನೇ ಸ್ಥಾನದಲ್ಲಿದೆ. ಆದರೆ, ಇತ್ತೀಚೆಗೆ ಕೃಷಿಗೆ ಸಂಬಂಧಿಸಿದ ಹೊಸ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ರೈತಾಪಿ ವರ್ಗಕ್ಕೆ ಮಾರಕ ಎಂಬಂತೆ ತೋರಿ ಬರುತ್ತಿವೆ. ಇದಕ್ಕೆ ಅಡಿಕೆ ಬೆಳೆಗಾರರು ಹೊರತಾಗಿಲ್ಲ ಎನ್ನುವ ಆತಂಕ ವ್ಯಕ್ತಪಡಿಸಿದರು.

ಸಿಇಓ ಪ್ರಕಾಶ್ ತಿಳುವಳಿಕೆ ಪತ್ರ ಓದುವ ಮೂಲಕ ಮಹಾಸಭೆಯ ಅನುಮತಿ ಮೇರೆಗೆ ಹಾಜರಾತಿ ದಾಖಲಿಸಿ, ಲೆಕ್ಕ ಪರಿಶೋಧನಾ ವರದಿ ಮಂಡಿಸಿ ಸಭೆಯ ಒಪ್ಪಿಗೆ ಪಡೆಯಲಾಯಿತು.

ಹಿರಿಯ ಲೆಕ್ಕಪರಿಶೋಧಕ ರವೀಂದ್ರನಾಥ್  ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿದರು.

ನಿರ್ದೇಶಕರಾದ ಮೂಡಬಾಗಿಲು ರಮಾನಂದ, ವಿನಾಯಕ ಹೆದ್ಲಿ, ಎಸ್.ಪಿ. ಸುರೇಶ್, ಕಣಿವೆಬಾಗಿಲು ಸುಬ್ರಹ್ಮಣ್ಯ, ಕೋಡೂರು ಸುಬ್ರಹ್ಮಣ್ಯ ಭಟ್, ಅರವಿಂದ, ಅನಂತ ಪದ್ಮನಾಭ ಬಾಯಿರಿ, ಸುಜಾತ ಉಡುಪ, ಜ್ಯೋತಿ ಹರಿಕೃಷ್ಣ, ಸಿಬ್ಬಂದಿಗಳಾದ ಮಧುಕರ್, ಸುಮಂತ್, ಮಹೇಶ್, ನಾಗಲಿಂಗೇಶ್, ಕು. ಸೌಮ್ಯ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಶ್ರೀಲಕ್ಷ್ಮಿ ಪ್ರಾರ್ಥಿಸಿ, ಶಾಖಾ ವ್ಯವಸ್ಥಾಪಕ ಸುನೀಲ್ ಹಳೆತೋಟ ಸ್ವಾಗತಿಸಿದರು, ನಿರ್ದೇಶಕ ಬಿ.ಪಿ. ಉಮೇಶ್ ವಂದಿಸಿದರು.

ಕಾಮೆಂಟ್‌ಗಳಿಲ್ಲ