Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ತಾಲ್ಲೂಕಿನಾದ್ಯಂತ ಬಿರುಸು ಪಡೆದುಕೊಂಡ ಮಘೆ ಮಳೆ - ಮಾಸ್ತಿಕಟ್ಟೆಯಲ್ಲಿ 165 ಮಿಲಿ ಮೀಟರ್ ಮಳೆ ದಾಖಲು

ಹೊಸನಗರ : ರಾಜ್ಯದ ಪ್ರಮುಖ ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲ್ಲೂಕಿನಾದ್ಯಂತ ಮಘೆ ಮಳೆ ಭರ್ಜರಿಯಾಗಿ ಸುರಿಯುತ್ತಿದ್ದು, ಮತ್ತೆ ಎಲ್ಲೆಡೆ ಅಪ್ಪಟ ಮಳೆಗಾಲದ ವಾತಾವರಣವೇ ಕಾಣುತ್ತಿದೆ. ಮಘೆ ಮಳೆಯ ಬಿರುಸು ಹೆಚ್ಚುತ್ತಿರುವುದರಿಂದ ಜನರ ದಿನನಿತ್ಯದ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

CLICK ಮಾಡಿ - ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ - ಈಜು ಸ್ಪರ್ಧೆಯಲ್ಲಿ ಹೊಸನಗರದ ಸಹ ಶಿಕ್ಷಕಿ ಲತಾ ಭೂಷಣ್‌ ದ್ವಿತೀಯ

ಇಂದು ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ 165 ಮಿಲಿ ಮೀಟರ್ ಮಳೆ ದಾಖಲಾಗಿದ್ದರೆ, ಬಿದನೂರು ನಗರದಲ್ಲಿ 164 ಮಿಲಿ ಮೀಟರ್, ಹುಲಿಕಲ್ಲಿನಲ್ಲಿ 134 ಮಿಲಿ ಮೀಟರ್, ಸಾವೇಹಕ್ಲಿನಲ್ಲಿ 119 ಮಿಲಿ ಮೀಟರ್, ಮಾಣಿಯಲ್ಲಿ 41 ಮಿಲಿ ಮೀಟರ್, ಕಾರ್ಗಲ್ಲಿನಲ್ಲಿ 25 ಮಿಲಿ ಮೀಟರ್ ಮಳೆ ದಾಖಲಾಗಿದೆ. ಹೊಸನಗರ ಪಟ್ಟಣದಲ್ಲಿ ಇಂದು ಬೆಳಿಗ್ಗೆಯಿಂದಲೇ ಒಂದೇ ಸಮನೆ ಮಳೆ ಸುರಿಯುತ್ತಿದೆ.

ಕಾಮೆಂಟ್‌ಗಳಿಲ್ಲ