ಹೊಸನಗರ ತಾಲ್ಲೂಕು ಶಿಕ್ಷಕರ ಸಂಘದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಜಿ. ಪುಟ್ಟಸ್ವಾಮಿ ಆಯ್ಕೆ
ಹೊಸನಗರ : ಇತ್ತೀಚೆಗೆ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ತಾಲ್ಲೂಕು ಸಂಘದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಕೆ. ಜಿ. ಪುಟ್ಟಸ್ವಾಮಿ ಕತ್ರಿಕೊಪ್ಪ, ಖಜಾಂಚಿಯಾಗಿ ಗಣೇಶ್ ಸೋರೆಕೊಪ್ಪ ಹಾಗೂ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ಮೇಲಿನಬೆಸಿಗೆಯ ಪೂರ್ಣಿಮಾ ಎಂ .ಎನ್. ಆಯ್ಕೆಯಾದರು.
ಈ ವೇಳೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ಬಸವಣ್ಣಪ್ಪ, ಗೌರವಾಧ್ಯಕ್ಷ ಜಗದೀಶ್ ಕಾಗಿನೆಲೆ, ಉಪಾಧ್ಯಕ್ಷೆ ಲಿಲ್ಲಿ ಡಿಸೋಜಾ, ಶಿವಮೂರ್ತಿ, ಶಿವಪ್ಪ ಹೆಚ್.ಸಿ, ಡಿ. ಗಂಗನಾಯಕ್ ಹಾಗೂ ಡಿ. ಧರ್ಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ