ಕೆಡಿಪಿಗೆ ನಾಗೇಂದ್ರ ಜೋಗಿ ನಾಮ ನಿರ್ದೇಶನ - ಕಾಂಗ್ರೆಸ್ ಅಭಿನಂದನೆ
ಹೊಸನಗರ: ತಾಲ್ಲೂಕಿನ ನಿಟ್ಟೂರಿನಲ್ಲಿ ನಡೆದ ಕಾಂಗ್ರೆಸ್ ಘಟಕದ ಸಭೆಯಲ್ಲಿ ಇತ್ತೀಚೆಗೆ ತಾಲ್ಲೂಕು ತ್ರೈಮಾಸಿಕ ಕೆಡಿಪಿ ಸಭೆಗೆ ನೂತನ ಸದಸ್ಯರಾಗಿ ನಾಮನಿರ್ದೇಶನಗೊಂಡ ಸ್ಥಳೀಯ ಕಾಂಗ್ರೆಸ್ ಘಟಕ ಅಧ್ಯಕ್ಷ ನಾಗೇಂದ್ರ ಜೋಗಿ ಅವರನ್ನು ಘಟಕದ ಸದಸ್ಯರು ಅಭಿನಂದಿಸಿದರು.
ನಾಮನಿರ್ದೇಶನಕ್ಕೆ ಕಾರಣವಾದ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಸೇರಿದಂತೆ ಹಲವರಿಗೆ ಘಟಕವು ಅಭಿನಂದನೆ ಸಲ್ಲಿಸಿತು.
CLICK ಮಾಡಿ - ಹೊಸನಗರ ಸುಮೇಧಾ ಸೌಹಾರ್ದ ಸಹಕಾರಿ ಸಂಘದಿಂದ ಶೇ. 10 ಲಾಭಾಂಶ ಘೋಷಣೆ
ಈ ವೇಳೆ ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೋಡಿ ವಿಶ್ವನಾಥ್, ಚಂದಯ್ಯ ಜೈನ್, ಶೋಭಾ ಉದಯ್ ಕುಮಾರ್, ಯಶೋಧಮ್ಮ ರಾಘವೇಂದ್ರ ಆಚಾರ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮಂಜಪ್ಪ ಬೆನ್ನಟ್ಟೆ, ನಿಟ್ಟೂರು ಬೂತ್ ಸಮಿತಿಯ ಅಧ್ಯಕ್ಷ ಜೆ.ವಿ. ಸುಬ್ರಹ್ಮಣ್ಯ, ಕೆ.ಬಿ. ಸರ್ಕಲ್ ಬೂತ್ ಸಮಿತಿಯ ಅಧ್ಯಕ್ಷ ಓಂಕಾರ್ ತೋರಗೋಡು, ಪಿಎಸಿಎಸ್ ನಿಟ್ಟೂರಿನ ಉಪಾಧ್ಯಕ್ಷ ರವೀಂದ್ರ ಚನ್ನಪ್ಪ, ಉದಯ್ ಪೂಜಾರಿ, ಯುವ ಮುಖಂಡ ಕುಂಬ್ಳೆ ರಾಘು ಮೊದಲಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ