Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹುಲಿಕಲ್ ಘಾಟಿ ರಸ್ತೆಯಲ್ಲಿ ಎರಡು ಲಾರಿಗಳ ನಡುವೆ ಅಪಘಾತ - ಬೆಳಿಗ್ಗೆ 5 ರಿಂದ 9ರ ತನಕ ಸಂಚಾರ ಬಂದ್‌‌

ಹೊಸನಗರ : ಹುಲಿಕಲ್‌ ಘಾಟಿ ರಸ್ತೆಯಲ್ಲಿ ಇಂದು ಬೆಳಿಗ್ಗೆ ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೆಳಿಗ್ಗೆ 5 ಗಂಟೆಯಿಂದ ಹುಲಿಕಲ್‌ ರಸ್ತೆ ಸಂಚಾರ ಬಂದ್‌ ಆಗಿದ್ದು, 9 ಗಂಟೆ ಸುಮಾರಿಗೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಇಂದು ಬೆಳಿಗ್ಗೆ ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿ ಎರಡೂ ಲಾರಿಗಳು ರಸ್ತೆಯ ಮಧ್ಯದಲ್ಲೇ ನಿಂತ ಪರಿಣಾಮ, ಎರಡು ಕಡೆಯ ವಾಹನ ಸಂಚಾರ ಬಂದ್‌ ಆಗಿತ್ತು. ಕುಂದಾಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ, ಶಿವಮೊಗ್ಗ ಕಡೆಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ ವಾಹನಗಳು ಕಿಲೋಮೀಟರ್‌‌ ಉದ್ದಕ್ಕೂ ಸಾಲುಗಟ್ಟಿ ನಿಂತಿದ್ದವು. ಹುಲಿಕಲ್ ಚೆಕ್‌ ಪೋಸ್ಟ್‌ ಬಳಿ ಈ ಅಪಘಾತ ಸಂಭವಿಸಿದ್ದು, ಮಳೆ ಹಾಗೂ ಮಂಜು ಮುಸುಕಿದ ಕಾರಣ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ನಗರ ಠಾಣಾ ವ್ಯಾಪ್ತಿಗೆ ಅಪಘಾತದ ಪ್ರದೇಶ ಸೇರಿದ್ದು, ನಿರಂತರ ಕೆಲಸ ಮಾಡಿದ ನಗರ ಪೊಲೀಸರ ಪ್ರಯತ್ನದಿಂದಾಗಿ 9 ಗಂಟೆ ಸುಮಾರಿಗೆ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.

ಕಾಮೆಂಟ್‌ಗಳಿಲ್ಲ