ಮುಂದುವರಿದ ಭಾರೀ ಮಳೆ - ಹೊಸನಗರ ತಾಲ್ಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ನಾಳೆ ಶನಿವಾರವೂ ರಜೆ
ಹೊಸನಗರ : ತಾಲ್ಲೂಕಿನೆಲ್ಲೆಡೆ ಮಳೆ ನಿರಂತರವಾಗಿ ಮುಂದುವರಿದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ನಾಳೆ ಅಂದರೆ ಜುಲೈ 20ರ ಶನಿವಾರ ತಾಲ್ಲೂಕಿನ ಎಲ್ಲಾ ಶಾಲಾ - ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸಿ ತಹಶೀಲ್ದಾರ್ ರಶ್ಮಿ ಹೆಚ್ ಅವರು ಆದೇಶ ಹೊರಡಿಸಿದ್ದಾರೆ.
ಮಳೆ ಕಾರಣ ರಜೆಯಿಂದಾಗಿ ಮನೆಯಲ್ಲಿರುವ ಮಕ್ಕಳ ಬಗ್ಗೆ ಜಾಗ್ರತೆ ವಹಿಸುವಂತೆ ಪಾಲಕರಿಗೆ ಕಿವಿಮಾತು ಹೇಳಿರುವ ತಹಶೀಲ್ದಾರ್, ಮುಂದಿನ 24 ಗಂಟೆಗಳಲ್ಲಿ ತಾಲ್ಲೂಕಿನೆಲ್ಲೆಡೆ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ಘೋಷಿಸಿದ್ದಾಗಿ ತಿಳಿಸಿದ್ದಾರೆ. ತಾಲ್ಲೂಕಿನ ಸರ್ಕಾರಿ, ಅನುದಾನಿತ, ಖಾಸಗಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಕಾಲೇಜುಗಳಿಗೆ ಮಳೆಯ ಕಾರಣ ನಾಳೆ ರಜೆ ನೀಡಲಾಗಿದೆ.
ಹೊಸನಗರ ತಾಲ್ಲೂಕಿನಲ್ಲಿ ಹಲವು ಮನೆಗಳಿಗೆ ಮುಳುವಾದ ಭಾರೀ ಮಳೆ! ಮಳೆಗೆ ಮನೆ ಕಳೆದುಕೊಂಡವರ ಕಷ್ಟ ಕೇಳುವವರ‍್ಯಾರು?!
ಕಳೆದ ನಾಲ್ಕು ದಿನಗಳಿಂದ ತಾಲ್ಲೂಕಿನ ಎಲ್ಲಾ ಶಾಲಾ - ಕಾಲೇಜುಗಳಿಗೆ ’ಮಳೆಯ ರಜೆ’ ನೀಡಲಾಗಿದ್ದು, ನಾಳೆಯೊಂದಿಗೆ ಸತತವಾಗಿ ಐದು ದಿನ ರಜೆ ನೀಡಿದಂತಾಗಿದೆ.
ಕಾಮೆಂಟ್‌ಗಳಿಲ್ಲ