Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ತಾಲ್ಲೂಕಿನ ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ - ಪರಿಸ್ಥಿತಿ ಅವಲೋಕನ

ಹೊಸನಗರ : ಕಳೆದ ನಾಲ್ಕಾರು ದಿನಗಳಿಂದ ತಾಲ್ಲೂಕಿನಲ್ಲಿ ಮುಂಗಾರು ಮಳೆ ವ್ಯಾಪಕವಾಗಿ ಬೀಳುತ್ತಿದ್ದು, ಹಲವಾರು ಅವಘಡಗಳನ್ನು ಸೃಷ್ಟಿಸಿದೆ.

ಮಳೆಯಿಂದ ಹಾನಿಗೊಳಗಾದ ತಾಲ್ಲೂಕಿನ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಗುಂಡಿ ಗ್ರಾಮದ ಸರ್ವೆ ನಂಬರ್ 9ರ ಹೊಸಕೆರೆಯ ಚಾನೆಲ್‌ ದಂಡೆ ಒಡೆದು, ಸುತ್ತಲ ನೂರಾರು ಎಕರೆ ಕೃಷಿಭೂಮಿಗೆ ಹಾನಿ ಆಗಿರುವುದನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಡಾ. ಗುರುದತ್ತ ಹೆಗಡೆ ಅವರು, ನಂತರ ಮಾರುತೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಕೊಪ್ಪ- ನಿಂಬೇಸರ ಗ್ರಾಮಗಳ ನಡುವಿನ ಪ್ರಾಥಮಿಕ ಶಾಲೆಗೆ ಹೋಗುವ ಭಾರೀ ಹಾನಿಗೊಳಗಾದ ಸಂಪರ್ಕ ರಸ್ತೆಯನ್ನು ವೀಕ್ಷಿಸಿದರು.


ಈ ಬಾರಿಯ ಮಳೆ ವ್ಯಾಪಕ ಹಾನಿಗೆ ಕಾರಣವಾಗಿದ್ದು ಕೂಡಲೇ ತಾಲ್ಲೂಕಿನ ಎಲ್ಲಾ ಮಳೆಹಾನಿ ಪ್ರದೇಶಗಳಿಗೆ ಕಂದಾಯ ಇಲಾಖೆಯ ಸಿಬ್ಬಂದಿಗಳು ತೆರಳಿ, ಸೂಕ್ತ ಮಾಹಿತಿ ಸಂಗ್ರಹಿಸಿ, ಅತಿವೃಷ್ಟಿಯಿಂದಾಗಿರುವ ಸಮಗ್ರ ನಷ್ಟದ ವರದಿಯನ್ನು ತಯಾರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಅವರು ತಾಲ್ಲೂಕು ಆಡಳಿತಕ್ಕೆ ಸೂಚಿಸಿದರು.

ಈ ವೇಳೆ ತಹಶೀಲ್ದಾರ್ ರಶ್ಮಿ ಹೆಚ್‌.ಜೆ, ತಾಲ್ಲೂಕು ಪಂಚಾಯ್ತಿ ಇ ಓ ನರೇಂದ್ರ ಕುಮಾರ್‌, ಕೋಡೂರು ಗ್ರಾಮ ಪಂಚಾಯಿತಿ ಪಿಡಿಓ ನಾಗರಾಜ್, ಕಸಬಾ ಕಂದಾಯ ನಿರೀಕ್ಷಕ ರೇಣುಕಪ್ಪ ಮೊದಲಾದವರು ಇದ್ದರು.


ಕಾಮೆಂಟ್‌ಗಳಿಲ್ಲ