Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ತಾಲ್ಲೂಕಿನಲ್ಲಿ ಮಳೆಯಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಶಾಸಕ ಬೇಳೂರು ಆಪ್ತರಿಂದ ಮುಂದುವರಿದ ಧನ ಸಹಾಯ

ಹೊಸನಗರ :  ಇತ್ತೀಚೆಗೆ ಸುರಿದ ಭಾರೀ ಮಳೆಗೆ ತಾಲ್ಲೂಕಿನ ಕಸಬಾ ಹೋಬಳಿ ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದ ರಾಘವೇಂದ್ರ ಭಂಡಾರಿ ಬಿನ್ ರಾಮಕೃಷ್ಣ ಭಂಡಾರಿ ಅವರ ಮನೆ ಮೇಲೆ ಬೃಹತ್‌ ಮರ ಬಿದ್ದ ಪರಿಣಾಮ ನಷ್ಟವಾಗಿತ್ತು. ಸ್ಥಳಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ, ಶಾಸಕರ ಪರವಾಗಿ ಆರ್ಥಿಕ ನೆರವು ನೀಡಿದರು.

ಹೊಸನಗರ ತಾಲ್ಲೂಕಿನ ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ - ಪರಿಸ್ಥಿತಿ ಅವಲೋಕನ

ಈ ಸಂದರ್ಭದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಶಶಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ವೀರಭದ್ರಪ್ಪ ಗೌಡ, ಗ್ರಾಮಸ್ಥರಾದ ಹೊಸಹಳ್ಳಿ ಯೋಗೇಂದ್ರ ಭಂಡಾರಿ, ಎಂಪಿಎಂ ವಾಚರ್ ಚಂದ್ರಪ್ಪ, ಯಲ್ಲಪ್ಪ, ಚೇತನ್ ದಾಸ್ ಹೊಸಮನೆ ಇನ್ನಿತರರು ಜೊತೆಗಿದ್ದರು.

ಬಾಳೂರು ಕುಕ್ಕಳಲೆಯಲ್ಲಿ ಮನೆ ಕುಸಿತ: ಸಂತ್ರಸ್ತರಿಗೆ ಶಾಸಕ ಬೇಳೂರು ಆಪ್ತರಿಂದ ಧನ ಸಹಾಯ

ಎಡೆಬಿಡದೆ ಸುರಿದ ಗಾಳಿ ಮಳೆಗೆ ತಾಲ್ಲೂಕಿನ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕಳಲೆ (ಈಚಲಕೊಪ್ಪ ಮಜರೆ) ಗ್ರಾಮದ ವಾಸಿ ಸಾವಿತ್ರಮ್ಮ ಕೋಂ ಹಾಲಪ್ಪ ಅವರ ವಾಸದ ಮನೆ ಸಂಪೂರ್ಣ ಜಖಂಗೊಂಡಿತ್ತು. ವಿಷಯ ತಿಳಿದ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ, ಶಾಸಕರ ಪರವಾಗಿ ಆರ್ಥಿಕ ನೆರವು ನೀಡಿದರು.

ಈ ಸಂದರ್ಭದಲ್ಲಿ ರಿಪ್ಪನ್‌‌ಪೇಟೆ ಠಾಣೆ ಪಿಎಸ್ಐ ಪ್ರವೀಣ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಅಂಬಿಕಾ, ರಿಪ್ಪನ್‌‌ಪೇಟೆ  ಕಾಂಗ್ರೆಸ್ ಘಟಕದ ಅಧ್ಯಕ್ಷ ಗಣಪತಿ.ಹೆಚ್.ಎಸ್, ಬಾಳೂರು ಘಟಕದ ಅಧ್ಯಕ್ಷ ಚಿಂತು, ಪ್ರಮುಖರಾದ ರಾಘವೇಂದ್ರ, ಚೇತನ್ ದಾಸ್ ಹೊಸಮನೆ ಇತರರು ಇದ್ದರು.


ಕಾಮೆಂಟ್‌ಗಳಿಲ್ಲ