Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಸೊನಲೆಯಲ್ಲಿ ಧರೆ ಕುಸಿತ - ಸಂಪರ್ಕ ಕಡಿತದ ಭೀತಿಯಲ್ಲಿ 25ಕ್ಕೂ ಹೆಚ್ಚು ಕೃಷಿ ಕುಟುಂಬಗಳು

ಹೊಸನಗರ : ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಿಕೊಪ್ಪ ಗ್ರಾಮದ ಮುಖ್ಯ ಸಂಪರ್ಕ ರಸ್ತೆಯಲ್ಲಿ ಧರೆ ಕುಸಿತ ಸಂಭವಿಸಿದ್ದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.


VIDEO - ಅರಸಾಳಿನ ಬಟಾಣಿಜಡ್ಡಿನ ಬಳಿ ರೈಲ್ವೆ ಹಳಿ ಮೇಲೆ ಬಿದ್ದ ಮರ - ಉಳಿ ಸುತ್ತಿಗೆ ಬಳಸಿ ಪ್ರಯಾಣಿಕರಿಂದಲೇ ಮರ ತೆರವು

ಈ ಭಾಗದ ಸುಮಾರು 25ಕ್ಕೂ ಹೆಚ್ಚು ಕೃಷಿ ಕುಟುಂಬಗಳು ಈ ರಸ್ತೆಯನ್ನೇ ನಿತ್ಯ ಬಳಕೆಗೆ ಆಶ್ರಯಿಸಿವೆ. ಒಂದೊಮ್ಮೆ ಧರೆ ಕುಸಿತ ಮುಂದುವರಿದು ರಸ್ತೆ ಸಂಪರ್ಕ ಕಡಿತಗೊಂಡರೆ ಸಂಪರ್ಕ ಅಸಾಧ್ಯವಾಗುತ್ತದೆ. ಧರೆ ಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿತದ ಅಪಾಯದ ಮುನ್ಸೂಚನೆ ಪಡೆದ ಗ್ರಾಮ ಪಂಚಾಯಿತಿ ಸದಸ್ಯ ಕೊಳಗಿ ಸತೀಶ್, ಬೋರಿಕೊಪ್ಪ ರಾಘವೇಂದ್ರ, ಪಿಡಿಓ ಕಾವೇರಿ, ಗ್ರಾಮ ಸಹಾಯಕ  ಸಿದ್ದಪ್ಪ, ಗ್ರಾಮಸ್ಥರಾದ ಪಾಂಡು, ಈಶ್ವರಪ್ಪ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಧರೆ ಕುಸಿತದಿಂದ ಸಂಪರ್ಕ ರಸ್ತೆಗೆ ತೊಂದರೆಯಾಗದಂತೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.

ಕಾಮೆಂಟ್‌ಗಳಿಲ್ಲ