ಮಾರುತೀಪುರದಲ್ಲಿ ಮಳೆಯಿಂದ ಮನೆಗೆ ಹಾನಿ - ಶಾಸಕ ಬೇಳೂರು ಆಪ್ತರಿಂದ ಸಂತ್ರಸ್ತರಿಗೆ ಆರ್ಥಿಕ ನೆರವು
ಹೊಸನಗರ: ಕಳೆದ ಕೆಲವು ದಿನಗಳಿಂದ ತಾಲ್ಲೂಕಿನೆಲ್ಲೆಡೆ ಭಾರೀ ಮಳೆ ಸುರಿಯುತ್ತಿದೆ. ನಿನ್ನೆ ರಾತ್ರಿ ಇಲ್ಲಿನ ಮಾರುತೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟಮ್ಮ ಕೋಂ ನಾಗರಾಜ್ ಎನ್ನುವವರ ವಾಸದ ಮನೆಯ ಗೋಡೆ ಭಾರೀ ಗಾಳೆ ಮತ್ತು ಮಳೆಯಿಂದಾಗಿ ಬಿದ್ದು ಹೋಗಿದೆ.
ಘಟನಾ ಸ್ಥಳಕ್ಕೆ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ, ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಪರವಾಗಿ ಆರ್ಥಿಕ ಸಹಾಯ ನೀಡಿದರು.
ಹೊಸನಗರ ತಾಲ್ಲೂಕಿನಲ್ಲಿ ಹಲವು ಮನೆಗಳಿಗೆ ಮುಳುವಾದ ಭಾರೀ ಮಳೆ! ಮಳೆಗೆ ಮನೆ ಕಳೆದುಕೊಂಡವರ ಕಷ್ಟ ಕೇಳುವವರ‍್ಯಾರು?!
ಈ ವೇಳೆ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಹೆಚ್.ಟಿ. ಚಿದಂಬರ್, ಮಾರುತೀಪುರ ಗ್ರಾ. ಪಂ. ಅಧ್ಯಕ್ಷೆ ದೀಪಿಕಾ ಕೃಷ್ಣ , ಮಾಜಿ ಉಪಾಧ್ಯಕ್ಷೆ ಜಯಮ್ಮ, ಸದಸ್ಯ ಇಂದ್ರೇಶ್ ಹೊಸಕೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ