Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಭಾರೀ ಗಾಳೆ - ಮಳೆ - ಹೊಸನಗರ ತಾಲ್ಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ

ಹೊಸನಗರ : ತಾಲ್ಲೂಕಿನೆಲ್ಲೆಡೆ ಅತಿಯಾದ ಮಳೆ ಹಾಗೂ ಗಾಳಿ ವ್ಯಾಪಕವಾಗಿ ಬೀಸುತ್ತಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಇಂದು ಅಂದರೆ ದಿನಾಂಕ 26-07-2024ರ ಶುಕ್ರವಾರದಂದು ತಾಲ್ಲೂಕಿನ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು ,ಪದವಿ ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿಗೆ ತಾಲ್ಲೂಕು ಆಡಳಿತ ರಜೆಯನ್ನು ಘೋಷಿಸಿದೆ.

CLICK ಮಾಡಿ - ಹೊಸನಗರ ಪಟ್ಟಣದಲ್ಲೇ ಧರೆ ಕುಸಿತದ ಭೀತಿ - ಕೃಷಿ ಜಮೀನಿಗೆ ನುಗ್ಗುತ್ತಿರುವ ಮಳೆ ನೀರಿನಿಂದ ಕಂಗಾಲಾದ ರೈತ - ನಷ್ಟ ತಪ್ಪಿಸಲು ತಡೆಗೋಡೆ ನಿರ್ಮಾಣಕ್ಕೆ ಒತ್ತಾಯ

ಮಳೆ ಕಾರಣ ರಜೆಯಿಂದಾಗಿ ಮನೆಯಲ್ಲಿರುವ ಮಕ್ಕಳ ಬಗ್ಗೆ ಜಾಗ್ರತೆ ವಹಿಸುವಂತೆ ಪಾಲಕರಿಗೆ ಕಿವಿಮಾತು ಹೇಳಿರುವ ತಾಲ್ಲೂಕು ಆಡಳಿತ, ತಾಲ್ಲೂಕಿನ ಸರ್ಕಾರಿ, ಅನುದಾನಿತ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಇಂದು ರಜೆ ನೀಡಲಾಗಿದೆ ಎಂದು ತಿಳಿಸಿದೆ.

ಕಳೆದ ವಾರ ಪೂರ್ತಿ ತಾಲ್ಲೂಕಿನ ಎಲ್ಲಾ ಶಾಲಾ - ಕಾಲೇಜುಗಳಿಗೆ ’ಮಳೆಯ ರಜೆ’ ನೀಡಲಾಗಿತ್ತು. ಮಳೆ ಬಿಡುವಿನಿಂದಾಗಿ ಈ ವಾರದ ಆರಂಭದಿಂದ ಶಾಲೆ ಪುನಃ ತೆರೆದಿದ್ದು, ನಿನ್ನೆ ವ್ಯಾಪಕ ಗಾಳಿ - ಮಳೆಯ ಕಾರಣ ನಗರ, ಕರಿಮನೆ, ಸಂಪೆಕಟ್ಟೆ, ನಿಟ್ಟೂರು ಮತ್ತು ಯಡೂರು ಕ್ಲಸ್ಟರ‍್ರಿನ ಶಾಲೆಗಳಿಗೆ ಶಾಲಾ ಹಂತದಲ್ಲೇ ರಜೆ ಘೋಷಿಸಲು ಹೊಸನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚನೆ ನೀಡಿದ್ದರು. ಇಂದು ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

ಕಾಮೆಂಟ್‌ಗಳಿಲ್ಲ