ವಲಯ ಮಟ್ಟದ ಕ್ರೀಡಾಕೂಟ - ಬಟ್ಟೆಮಲ್ಲಪ್ಪ ವ್ಯಾಸ ಮಹರ್ಷಿ ಗುರುಕುಲಕ್ಕೆ ಸಮಗ್ರ ಪ್ರಶಸ್ತಿ
ಹೊಸನಗರ : ತಾಲ್ಲೂಕಿನ ಮಾರುತೀಪುರದಲ್ಲಿ ನಿನ್ನೆ ನಡೆದ 2024 -25ನೇ ಸಾಲಿನ 14 ವರ್ಷ ವಯೋಮಿತಿಯೊಳಗಿನ ಹಿರಿಯ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.
ಮಾರುತೀಪುರ ಹಾಗೂ ಆಲಗೇರಿಮಂಡ್ರಿ ಕ್ಲಸ್ಟರ್‌ಗಳ ಕ್ರೀಡಾಕೂಟದಲ್ಲಿ ಶ್ರೀ ವ್ಯಾಸ ಮಹರ್ಷಿ ಗುರುಕುಲದ ಮಕ್ಕಳು ಕ್ಲಸ್ಟರ್ ಮಟ್ಟದಲ್ಲಿ ಸತತ ನಾಲ್ಕನೇ ಬಾರಿ ಚಾಂಪಿಯನ್ ಆಗುವ ಮೂಲಕ ಸಮಗ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
CLICK ಮಾಡಿ - 5 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ - ಅರ್ಜಿ ಆಹ್ವಾನ
ವೈಯಕ್ತಿಕ ವಿಭಾಗದಲ್ಲಿ -
ಚುಕ್ಕಿ ಎಮ್. ಬ್ಯಾಣದ - 100 ಮೀಟರ್ ಓಟ ಪ್ರಥಮ, 400 ಮೀಟರ್ ಓಟ ಪ್ರಥಮ, ಉದ್ದ ಜಿಗಿತ ಪ್ರಥಮ.
ಪ್ರೇಕ್ಷ - 200 ಮೀಟರ್ ಓಟ ಪ್ರಥಮ, ಎತ್ತರ ಜಿಗಿತ ದ್ವಿತೀಯ.
ರಿಷಿ - 600 ಮೀಟರ್ ಓಟ ಪ್ರಥಮ, 100 ಮೀಟರ್ ಓಟ ತೃತೀಯ.
ಸುದೀಕ್ಷ - 600 ಮೀಟರ್ ಓಟ ಪ್ರಥಮ.
ಪವಿತ್ರ - 600 ಮೀಟರ್ ಓಟ ತೃತೀಯ.
ಅಮೋಘ - 400 ಮೀಟರ್ ಓಟ ದ್ವಿತೀಯ.
ತಂಡ ವಿಭಾಗದಲ್ಲಿ -
ರಿಲೆ ಚುಕ್ಕಿ ಎಂ. ಬ್ಯಾಣದ ತಂಡ ಪ್ರಥಮ.
ಹೆಣ್ಣು ಮಕ್ಕಳ ಖೋ ಖೋ ದ್ವಿತೀಯ.
ಗಂಡು ಮಕ್ಕಳ ಖೋ ಖೋ ಪ್ರಥಮ.
ಗಂಡು ಮಕ್ಕಳ ಕಬಡ್ಡಿ ಫೈನಲ್ ಪಂದ್ಯ ಸೋಮವಾರ ನಡೆಯಲಿದ್ದು, ಇದರಲ್ಲಿ ಶ್ರೀ ವ್ಯಾಸ ಮಹರ್ಷಿ ಗುರುಕುಲದ ಮಕ್ಕಳು ಮಾರುತೀಪುರ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳನ್ನು ಎದುರಿಸಲಿದ್ದಾರೆ.
ಒಟ್ಟಾರೆ ಸಮಗ್ರ ಪ್ರದರ್ಶನ ತೋರಿದ ಶ್ರೀ ವ್ಯಾಸ ಮಹರ್ಷಿ ಗುರುಕುಲ ಸತತ ನಾಲ್ಕನೇ ಬಾರಿ ಸಮಗ್ರ ಪ್ರಶಸ್ತಿ ಪಡೆಯಿತು. ವಿಜೇತ ಮಕ್ಕಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳಿಲ್ಲ