Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದಲ್ಲಿ ನಾಯಿ ಕಚ್ಚಿ ಮಹಿಳೆ ಸಾವು

ಹೊಸನಗರ : ಪಟ್ಟಣದ ಶಿವಪ್ಪನಾಯಕ ರಸ್ತೆಯಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರಿಗೆ ನಾಯಿ ಕಚ್ಚಿ ಶಂಕಿತ ರೇಬಿಸ್‌ನಿಂದ ಮೃತಪಟ್ಟ ಘಟನೆ ನಡೆದಿದೆ.

ಗೇರುಪುರ ಮೂಲದ ದಿವಂಗತ ಪ್ರಸನ್ನರವರ ಪತ್ನಿ 38 ವರ್ಷ ವಯಸ್ಸಿನ ಸಂಗೀತ ಎನ್ನುವವರಿಗೆ ಇದೇ ಜುಲೈ 14ರಂದು ನಾಯಿಯೊಂದು ಕಚ್ಚಿತ್ತು. ಇದಕ್ಕಾಗಿ ಹೊಸನಗರ ಹಾಗೂ ಶಿವಮೊಗ್ಗದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಇದೇ ಆಗಸ್ಟ್ 23ರ ಬೆಳಿಗ್ಗೆ 11:25ಕ್ಕೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಈ ಕುರಿತು ಹೊಸನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌ಗಳಿಲ್ಲ