ಹೊಸನಗರ ಶಾಸಕರ ಮಾದರಿ ಸರ್ಕಾರಿ ಶಾಲೆಯಲ್ಲಿ ಕೃಷ್ಣ ವೇಷ ಸ್ಪರ್ಧೆ
ಹೊಸನಗರ : ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಇಲ್ಲಿನ ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್ ಕೆ ಜಿ ಹಾಗೂ ಯುಕೆಜಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಹಲವಾರು ಪುಟಾಣಿಗಳು ಭಾಗವಹಿಸಿ, ತಮ್ಮ ಚಿತ್ತಾಕರ್ಷಕ ವೇಷಭೂಷಣದಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದು ವಿಶೇಷವಾಗಿತ್ತು.
ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ನೇರಲೆ ರಮೇಶ್, ಉಪಾಧ್ಯಕ್ಷೆ ರೋಹಿಣಿ ದೀಪಕ್, ಸದಸ್ಯರಾದ ಶೈಲಜಾ, ಲಕ್ಷ್ಮಿ, ನಾಸೀರ್, ಗೌತಮ್ ಆಚಾರ್ಯ, ವಿಜಯ್, ರಾಘವೇಂದ್ರ, ಪ್ರವೀಣ್, ಪ್ರದೀಪ್, ರೆಹಮತ್, ಚಂದ್ರಶೇಖರ್, ಎಲ್‌ಕೆಜಿ ಮತ್ತು ಯುಕೆಜಿ ಸ್ಕೂಲ್ ಅಸೋಸಿಯೇಷನ್ ಅಧ್ಯಕ್ಷ ನಾಗೇಶ್, ಶಿಕ್ಷಕರಾದ ತಾರಾ, ಲತಾ ನಾಯಕ್, ಗಾಯತ್ರಿ, ಮಮತ, ಪ್ರಕಾಶ್, ರಾಮು, ರಾಜುಶೆಟ್ಟಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ