ಡಿಕೆಶಿ ಭೇಟಿಯಾದ ಶಿಮೂಲ್ ನೂತನ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ - ಅಭಿನಂದನೆ
ಹೊಸನಗರ : ಇತ್ತೀಚೆಗೆ ಶಿಮೂಲ್ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡ ಬಳಿಕ ಗುರುಶಕ್ತಿ ವಿದ್ಯಾಧರ ಬೆಂಗಳೂರಿನಲ್ಲಿ ಇಂದು ಸಹಕಾರಿಗಳಾದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥ ಗೌಡ, ನಿರ್ದೇಶಕರಾದ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ, ಷಡಾಕ್ಷರಿ ಸಮ್ಮುಖದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ಕಾಮೆಂಟ್‌ಗಳಿಲ್ಲ