ಇಂದಿನಿಂದ ಏಪ್ರಿಲ್ 19ರವರೆಗೆ ರಾಮಚಂದ್ರಪುರ ಮಠದಲ್ಲಿ ಅದ್ಧೂರಿ ರಾಮೋತ್ಸವ
ಹೊಸನಗರ : ಹೊಸನಗರ : ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ರಾಮಚಂದ್ರಪುರ ಮಠದಲ್ಲಿ ಇಂದಿನಿಂದ ಅಂದರೆ ಏಪ್ರಿಲ್ 14ರ ಭಾನುವಾರದಿಂದ 19ರ ಶುಕ್ರವಾರದವರೆಗೆ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಸಂಪ್ರದಾಯದಂತೆ ವಿಜೃಂಭಣೆಯಿಂದ ಶ್ರೀ ರಾಮೋತ್ಸವ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ರಾಮೋತ್ಸವ ಸಮಿತಿ ಅಧ್ಯಕ್ಷ ಸೀತರಾಮ ಭಟ್ ತಿಳಿಸಿದರು.
ಏ.14ರಂದು ಶ್ರೀ ವಾಲ್ಮೀಕಿ ರಾಮಾಯಣ ಪಾರಾಯಣ ಆರಂಭದೊಂದಿಗೆ ರಾಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಏ.15ರ ಸೋಮವಾರ ಶ್ರೀಗಳ ಪುರ ಪ್ರವೇಶವು ಬೃಹತ್ ಮೆರವಣಿಗೆಯಲ್ಲಿ ಮಾವಿನಕೊಪ್ಪದ ಗಂಗಾಧರೇಶ್ವರ ದೇವಾಲಯದಿಂದ ಪಟ್ಟಣ ಪ್ರಮುಖ ಬೀದಿಗಳ ಮೂಲಕ ಸಾಗಿ ನಗರ ರಸ್ತೆಯ ಶ್ರೀ ವೀರಾಂಜನೇಯ ದೇವಾಲಯ ತಲುಪಿದ ನಂತರ, ಶ್ರೀಗಳಿಂದ ಆಶೀರ್ವಚನ ನಡೆಯಲಿದೆ. ಸಂಜೆ ಶ್ರೀ ಮಠದಲ್ಲಿ ದೀಪಮಾಲಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 7 ರಂದು ಕಾರಣಗಿರಿಯಲ್ಲಿ ಸಹಸ್ರ ಸತ್ಯನಾರಾಯಣ ಪೂಜೆ
ಏ.16ರ ಮಂಗಳವಾರ ಅಖಂಡ ಭಜನೆಯೊಂದಿಗೆ ಪೂಗ ಪೂಜೆ, ಸಂಜೆ ’ಮಾರುತಿ ಪ್ರತಾಪ’ ಎಂಬ ಯಕ್ಷಗಾನ ಪ್ರಸಂಗ ನಡೆಯಲಿದೆ. ಏ.17ರ ಬುಧವಾರ ರಾಮ ಜನ್ಮೋತ್ಸವ, ಸೀತಾ ಕಲ್ಯಾಣೋತ್ಸವ, ರಾಮಲೀಲಾ, ಶ್ರೀಮನ್ಮಹಾ ರಥೋತ್ಸವ ಸೇರಿದಂತೆ ವಿವಿಧ ವೈಶಿಷ್ಟ್ಯಪೂರ್ಣ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಏ.18ರ ಗುರುವಾರ ಶ್ರೀ ರಾಮ ಪಟ್ಟಾಭಿಷೇಕ, ಭಜನಾ ಮಂಗಳ, ಆಶೀರ್ವಚನ, ಮಂತ್ರಾಕ್ಷತೆ ನಡೆಯಲಿದೆ.
ಈ ಬಾರಿ ದಶಕಂಠ ರಾವಣನಿಗೆ ಇಪ್ಪತ್ತು ಕೈಗಳಿದ್ದು ಆತನ ಸಂಹಾರ ಕಾರ್ಯಕ್ರಮ ಭಕ್ತರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ ಎಂದು ಸಮಿತಿಯ ಅಧ್ಯಕ್ಷರು ತಿಳಿಸಿ, ಈ ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಮೋತ್ಸವ ಸಮಿತಿ ಗೋಪಾಲ್ ಭಟ್, ಸನ್ ಟೈಮ್ ವಿಶ್ವ, ಸುಧೀಂದ್ರ ಪಂಡಿತ್ ಮೊದಲಾದವರು ಇದ್ದರು.
ಕಾಮೆಂಟ್‌ಗಳಿಲ್ಲ