Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಕೆ.ಎಸ್. ಈಶ್ವರಪ್ಪನಿಗೆ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗುತ್ತಿದೆ - ರಾಷ್ಟ್ರ ಭಕ್ತ ಬಳಗದ ಹೊಸನಗರ ತಾಲ್ಲೂಕು ಸಂಚಾಲಕ ವಾಟಗೋಡು ಸುರೇಶ್

ಹೊಸನಗರ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ಭಕ್ತರ ಬಳಗದ ಪಕ್ಷೇತರ ಅಭ್ಯರ್ಥಿಯಾದ ಕೆ. ಎಸ್. ಈಶ್ವರಪ್ಪನವರಿಗೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು. ಹೆಚ್ಚಿನ ಅಂತರದ ಗೆಲುವನ್ನು ಪಡೆಯಲಿದ್ದಾರೆ ಎಂದು ರಾಷ್ಟ್ರ ಭಕ್ತರ ಬಳಗದ ತಾಲ್ಲೂಕು ಸಂಚಾಲಕರಾದ ವಾಟಗೋಡು ಸುರೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು ಕುಟುಂಬ ರಾಜಕಾರಣ, ಹಿಂದುತ್ವವನ್ನು ಮೂಲವಾಗಿಸಿಕೊಂಡ ರಾಜಕಾರಣಿಗಳ ಕಡೆಗಣನೆಯನ್ನೆಲ್ಲ ವಿರೋಧಿಸುವಂತಹ ಚುನಾವಣೆ ಇದಾಗಿದ್ದು, ಈ ಕಾರಣದಿಂದಲೇ ಈ ಬಾರಿ ಈಶ್ವರಪ್ಪನವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದಾರೆ ಎಂದರು.

ಹಳ್ಳಿ ಹಳ್ಳಿಗಳಲ್ಲಿಯೂ ಯುವಕರು, ಹಿಂದೂ ಸಂಘಟನೆಗಳು, ಹಿಂದೂ ಮುಖಂಡರುಗಳು, ಮಹಿಳೆಯರು ಅದೂ ಅಲ್ಲದೆ ಕಾಂಗ್ರೆಸ್ ಹಾಗೂ ಜೆಡಿಎಸ್ಸಿನ ಹಲವಾರು ಕಾರ್ಯಕರ್ತರು ಈಗಾಗಲೇ ಈಶ್ವರಪ್ಪನವರಿಗೆ ಬೆಂಬಲವನ್ನು ಸೂಚಿಸಿದ್ದು, ಕ್ಷೇತ್ರದಲ್ಲಿ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಮತ್ತು ಇದರಲ್ಲಿ ಕೆ.ಎಸ್. ಈಶ್ವರಪ್ಪನವರು ಮುಂಚೂಣಿಯಲ್ಲಿರುತ್ತಾರೆ ಎಂದು ವಾಟಗೋಡು ಸುರೇಶ್ ತಿಳಿಸಿದರು.

ನಾಮಪತ್ರ ಸಲ್ಲಿಕೆಯ ಬಳಿಕ ಕ್ಷೇತ್ರದೆಲ್ಲೆಡೆ ರಾಷ್ಟ್ರ ಭಕ್ತ ಬಳಗದ ಚುನಾವಣಾ ಕಚೇರಿಯನ್ನು ಆರಂಭಿಸಲಿದ್ದು, ಕೆ. ಎಸ್. ಈಶ್ವರಪ್ಪನವರು ಅತ್ಯಂತ ಹೆಚ್ಚು ಮತಗಳ ಗೆಲುವಿನೊಂದಿಗೆ ಲೋಕಸಭೆಗೆ ಆಯ್ಕೆಯಾಗಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಚಿನ್ ಗೌಡ, ರಮಿತ್ ಪೂಜಾರಿ, ರಂಜನ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ