ಬಹುಮುಖ ಪ್ರತಿಭೆ ನಟ ಏಸು ಪ್ರಕಾಶ್ ಹೆಗ್ಗೋಡು ಅವರಿಗೆ ಏಪ್ರಿಲ್ 19ರಂದು ’ಸಾರ’ ಶ್ರದ್ಧಾಂಜಲಿ
ಹೊಸನಗರ : ಇತ್ತೀಚೆಗೆ ನಿಧನರಾದ ಖ್ಯಾತ ರಂಗ ನಟ, ನಿರ್ದೇಶಕ, ಪರಿಸರಾಸಕ್ತ, ಸಂಘಜೀವಿ, ಸಂಘಟಕ ದಿವಂಗತ ಏಸು ಪ್ರಕಾಶ್ ಹೆಗ್ಗೋಡು ಇವರ ಸ್ಮರಣಾರ್ಥ ತಾಲ್ಲೂಕಿನ ಬಟ್ಟೆಮಲ್ಲಪ್ಪ ಸಮೀಪದ ದೊಂಬೆಕೊಪ್ಪದ ಸಾರ ಸಂಸ್ಥೆ ಕೆ.ವಿ.ಸುಬ್ಬಣ್ಣ ರಂಗ ಸಮೂಹದಲ್ಲಿ ಏಪ್ರಿಲ್ 19ರ ಶುಕ್ರವಾರ ಸಂಜೆ 5 ಗಂಟೆಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮೂಲೆಗದ್ದೆಯ ಶಿವಯೋಗಿ ಸದಾನಂದಾಶ್ರಮದ ಮ.ನಿ.ಪ್ರ. ಶ್ರೀ ಅಭಿನವ ಚನ್ನಬಸವ ಸ್ವಾಮಿಜಿ, ರಂಗಕರ್ಮಿ ಚಿದಂಬರ ಜಂಬೆ, ಕೆ.ಜಿ. ಕೃಷ್ಣಮೂರ್ತಿ, ಬಿ. ಪಾಪಯ್ಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಸಾರ ಸಂಸ್ಥೆಯ ಧನುಶ್ ಕುಮಾರ್ ತಿಳಿಸಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
ಕಾಮೆಂಟ್‌ಗಳಿಲ್ಲ