ಶ್ರೀ ರಾಮಚಂದ್ರಪುರ ಮಠದ ರಾಮೋತ್ಸವ ಹಿನ್ನೆಲೆ ಶ್ರೀಗಳ ಪುರಪ್ರವೇಶ
ಹೊಸನಗರ : ತಾಲ್ಲೂಕಿನ ಶ್ರೀ ರಾಮಚಂದ್ರಪುರ ಮಠದಲ್ಲಿ ನಿನ್ನೆಯಿಂದ ಆರಂಭವಾಗಿ ಇದೇ ತಿಂಗಳ ಹದಿನೆಂಟರವರೆಗೆ ನಡೆಯುವ ರಾಮೋತ್ಸವ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಶ್ರೀ ಸಂಸ್ಥಾನ ಗೋಕರ್ಣ ಮಠಾಧೀಶ ಪರಮಪೂಜ್ಯ ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪಟ್ಟಣದ ಶ್ರೀ ಗಂಗಾಧರೇಶ್ವರ ದೇವಸ್ಥಾನದಿಂದ ತೆರೆದ ಸಾಲಂಕೃತ ವಾಹನದಲ್ಲಿ ಪೂರ್ಣ ಕುಂಭ ಸ್ವಾಗತದೊಂದಿಗೆ ಪುರಪ್ರವೇಶ ಮಾಡಿದರು.
ಮಾವಿನಕೊಪ್ಪದಿಂದ ನೆಹರು ರಸ್ತೆ ಶಿವಪ್ಪನಾಯಕ ರಸ್ತೆ ಮೂಲಕ ಸಾಗಿ ಶ್ರೀ ವೀರಾಂಜನೇಯ ದೇವಸ್ಥಾನಕ್ಕೆ ತೆರಳಿದ ಶ್ರೀಗಳು ಅಲ್ಲಿಂದ ಶ್ರೀ ಮಠಕ್ಕೆ ತೆರಳಿದರು. ಶ್ರೀಗಳು ತೆರಳುವ ಮಾರ್ಗದಲ್ಲಿ ಭಕ್ತವೃಂದದವರು ತಳಿರು ತೋರಣ ಕಟ್ಟಿ, ಹೆಂಗಳೆಯರು ಮನೆಯದುರು ನೀರು ಹಾಕಿ ಸಾರಿಸಿ ರಂಗೋಲಿ ಬಿಡಿಸಿ ಅಲಂಕೃತಗೊಳಿಸಿದ್ದರು. ವೀರಾಂಜನೇಯ ದೇಗುಲ ತಲುಪಿದ ಬಳಿಕ ಮಠವು ರಾಮೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಭಕ್ತಾದಿಗಳಿಗೆ ಮುಕ್ತ ಆಹ್ವಾನ ನೀಡಿತು.
ಈ ಸಂದರ್ಭದಲ್ಲಿ ರಾಮೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಸೀತಾರಾಮ ಭಟ್, ನಿರ್ವಹಣಾ ಸಮಿತಿ ಸದಸ್ಯ ವಿಶ್ವ ಸನ್ ಟೈಂ, ಪ್ರಮುಖರಾದ ಎಲ್.ಕೆ. ಮುರಳಿ, ಶ್ರೀನಿವಾಸ ಕಾಮತ್, ಪ್ರಕಾಶ್ ಭಟ್, ದೇವಾನಂದ್, ವಿಜೇಂದ್ರ ಶೇಟ್, ಮಂಜುನಾಥ ಶ್ರೇಷ್ಠಿ, ಸುದೇಶ್ ಕಾಮತ್, ಪ್ರವೀಣ್ ಬೇಕರಿ, ಬ್ಯಾಂಕ್ ಹೆಗಡೆ, ಕೋಡೂರು ವಿಜೇಂದ್ರ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ