ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದರೆ ಮಾತ್ರ ಅವರ ಭವಿಷ್ಯ ಉಜ್ವಲಗೊಳ್ಳುತ್ತದೆ - ಸದ್ಗುಣ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ನ್ಯಾಯಾಧೀಶ ಸಂತೋಷ್
ಹೊಸನಗರ : ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದರೆ ಮಾತ್ರ ಅವರ ಭವಿಷ್ಯ ಉಜ್ವಲಗೊಳ್ಳುತ್ತದೆ. ಆ ನಿಟ್ಟಿನಲ್ಲಿ ತಂದೆ - ತಾಯಿ ಪಾತ್ರ ಬಹಳ ಮಹತ್ತರವಾಗಿದೆ ಎಂದು ಹೊಸನಗರ ಮುಖ್ಯನ್ಯಾಯಲಯದ ನ್ಯಾಯಾಧೀಶ ಸಂತೋಷ್ ತಿಳಿಸಿದರು.
ತಾಲ್ಲೂಕಿನ ಕಾರಣಗಿರಿಯಲ್ಲಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ಏರ್ಪಡಿಸಿದ್ದ ಐದು ದಿನಗಳ ಸದ್ಗುಣ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಯ, ವಿನಯ, ನಗು ಮಾನವನ ಬದುಕಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಮೌಲ್ಯಗಳಾಗಿವೆ. ಅವುಗಳನ್ನು ಬಾಲ್ಯದಲ್ಲೇ ಮಕ್ಕಳಲ್ಲಿ ಬಿತ್ತಬೇಕು ಎಂದರು.
ಗ್ರಾಮಭಾರತಿ ಟ್ರಸ್ಟ್‌ನ ಕಾರ್ಯದರ್ಶಿ ಹನಿಯ ರವಿ ಮಾತನಾಡಿ, ಮಕ್ಕಳಿಗೆ ಚಿಕ್ಕವರಿದ್ದಾಗಲೇ ಶಿಸ್ತು, ನಡತೆ, ಸಂಸ್ಕಾರ, ಉತ್ತಮಗುಣ ಇವೆಲ್ಲವೂಗಳನ್ನು ಕಲಿಸಬೇಕು. ಮಾನವ ಕೂಡಾ ಒಂದು ಸಂಪನ್ಮೂಲ ಎಂದು ಭಾವಿಸಿ ಸಂಸ್ಕಾರ, ಗುಣ ನಿರ್ಮಾಣ ಮಾಡಬೇಕು ಎಂದರು.
ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಕೆ. ಎಸ್. ನಳಿನಚಂದ್ರ ಅಧ್ಯಕ್ಷತೆ ವಹಿಸಿದ್ದರು. ಶ್ವೇತಾ ವಿಷ್ಣು ಜೋಯಿಸ್, ರಾಘವೇಂದ್ರ ಮತ್ತಿತರರು ಇದ್ದರು. ಶಮಾ ನಿರೂಪಿಸಿ, ಗುರುಮೂರ್ತಿ ವಂದಿಸಿದರು.
5 ದಿನಗಳ ಕಾಲ ನಡೆದ ಶಿಬಿರದಲ್ಲಿ 30 ಮಕ್ಕಳು ಭಾಗವಹಿಸಿದ್ದರು. ಶಿಬಿರದಲ್ಲಿ ಪ್ರಾರ್ಥನೆ, ವರ್ಣಲೇಪನ, ಶ್ಲೋಕಗಳು, ಸ್ತೋತ್ರಗಳು, ಭಜನೆ, ದೇಶಭಕ್ತಿಗೀತೆ, ನಾಟಕ, ನೃತ್ಯ, ಯೋಗ, ಕಥೆ, ದೇಶಿಯ ಆಟಗಳು, ಕಾಗದದ ಕಲೆ, ಚಿತ್ರಕಲೆ ಮುಂತಾದ ವಿಷಯಗಳಲ್ಲಿ ಶಿಕ್ಷಣ ನೀಡಲಾಯಿತು.
ಕಾಮೆಂಟ್‌ಗಳಿಲ್ಲ