Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ರಿಪ್ಪನ್‌ಪೇಟೆಯಲ್ಲಿ ಶ್ರೀ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ 21ನೇ ವರ್ಷದ ಪ್ರತಿಷ್ಠಾವರ್ಧಂತಿ ಮಹೋತ್ಸವ

 ರಿಪ್ಪನ್‌ಪೇಟೆ : ಇಲ್ಲಿನ ಸಾಗರ ರಸ್ತೆ ತಿಲಕ್‌ನಗರದ ಶ್ರೀ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ಸೇವಾ ಸಮಿತಿಯಿಂದ ನಿನ್ನೆ ಶ್ರೀ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ಇಪ್ಪತ್ತೊಂದನೇ ವರ್ಷದ ಪ್ರತಿಷ್ಠಾವರ್ಧಂತಿ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು. 

ಪ್ರತಿಷ್ಠಾವರ್ಧಂತಿ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 8.30ರಿಂದಲೇ, ಹರತಾಳು ಶ್ರೀ ರಾಘವೇಂದ್ರ ಸ್ವಾಮಿ ಮಠದ ಅರ್ಚಕರಿಂದ ನಾಗದೇವರ ಸನ್ನಿಧಿಯಲ್ಲಿ ಕಲಾ ಹೋಮ, ನವಕ ಪ್ರಧಾನ ಕಲಶ, ಅಧಿವಾಸ ಹೋಮ, ಪವಮಾನ ಅಭಿಷೇಕ, ಆಶ್ಲೇಷ ಬಲಿ ನಡೆದರೆ, ಶ್ರೀ ರಕ್ತೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ದುರ್ಗಾ ಹೋಮ, ಕಲಶಾಭಿಷೇಕ, ಮಹಾಪೂಜೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಾಗದೇವರ ಸನ್ನಿಧಿಯಲ್ಲಿ ಮಧ್ಯಾಹ್ನ ನಾಗಪಾತ್ರಿಗಳಾದ ಕೆ. ಶಂಕರಮೂರ್ತಿ ಮಂಜ ಬೆಳ್ಳಿಗದ್ದೆ ಇವರಿಂದ ನಡೆದ ನಾಗದರ್ಶನಕ್ಕೆ ನೆರೆದಿದ್ದ ಭಕ್ತ ಸಮೂಹ ಶ್ರದ್ಧಾಭಕ್ತಿಯೊಂದಿಗೆ ಸಾಕ್ಷಿಯಾಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಪ್ರತಿಷ್ಠಾವರ್ಧಂತಿ ಮಹೋತ್ಸವದ ಅಂಗವಾಗಿ ರಾತ್ರಿ ಶ್ರೀ ನಾಗೇಶ್ವರಿ ಶ್ರೀ ಸುಬ್ರಹ್ಮಣ್ಯ ಕೃಪಾಶ್ರಿತ ಯಕ್ಷಗಾನ ಮೇಳ, ಶ್ರೀ ಕ್ಷೇತ್ರ ಅಲಸೆ, ತೀರ್ಥಹಳ್ಳಿ ಇವರಿಂದ ಶ್ರೀ ಚಂಡಿಕೇಶ್ವರಿ ಮಹಾತ್ಮೆ  ಎನ್ನುವ ಪೌರಾಣಿಕ ಕಾಲಮಿತಿ ಯಕ್ಷಗಾನ ನಡೆಯಿತು..

ಕಾಮೆಂಟ್‌ಗಳಿಲ್ಲ