Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಕೋಡೂರು ಗ್ರಾಮ ಪಂಚಾಯ್ತಿ ಎದುರು ಹಾರೆ, ಗುದ್ದಲಿ, ಬುಟ್ಟಿಯೊಂದಿಗೆ ರೈತರ ದಿಢೀರ್ ಪ್ರತಿಭಟನೆ

ಕೋಡೂರು : ಇಲ್ಲಿನ ಬುಲ್ಡೋಜರ್ ಗುಡ್ಡದ ಪಿಕಪ್ ಚಾನಲ್ಲಿನ ದಂಡೆ ಪ್ರತೀವರ್ಷ ಒಡೆದು ನೀರು ಜಮೀನಿಗೆ ನುಗ್ಗಿ ಸಾಕಷ್ಟು ನಷ್ಟವಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಸೇರಿದಂತೆ ಗ್ರಾಮ ಪಂಚಾಯ್ತಿ ಗಮನಕ್ಕೆ ತಂದರೂ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಿ ಕುಸುಗುಂಡಿ, ಬುಲ್ಡೋಜರ್ ಗುಡ್ಡದ ಗ್ರಾಮಸ್ಥರು ಹಾರೆ, ಗುದ್ದಲಿ, ಬುಟ್ಟಿ ಸಮೇತವಾಗಿ ಆಗಮಿಸಿ ಗ್ರಾಮ ಪಂಚಾಯ್ತಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು. ಹಾಗೂ ತಮ್ಮ ಪ್ರತಿಭಟನೆಗೆ ಗ್ರಾಮ ಪಂಚಾಯ್ತಿಯಲ್ಲಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಸುಗುಂಡಿ, ಬುಲ್ಡೋಜರ್ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಸುಮಾರು 300 ಎಕರೆ ಜಮೀನಿಗೆ ನೀರು ಹರಿಸುವ ಚಾನಲ್ಲಿನ ದಂಡೆ ಪ್ರತಿ ವರ್ಷ ಅತಿಯಾದ ಮಳೆಯಿಂದಾಗಿ ಒಡೆದು ಹೋಗುತ್ತಿದೆ. ಇದರಿಂದ ರೈತರ ಜಮೀನುಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಈ ಬಗ್ಗೆ ನೀರಾವರಿ ಇಲಾಖೆ ಸೇರಿದಂತೆ ಪಂಚಾಯ್ತಿ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮವಾಗಿಲ್ಲ. ಈ ಬಾರಿಯ ಮಳೆಯಲ್ಲೂ ಮತ್ತೆ ಸಮಸ್ಯೆ ಆಗುತ್ತಿರುವುದರಿಂದ ನೊಂದ ರೈತರು, ತಕ್ಷಣವೇ ಚಾನಲ್ ದಂಡೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ಆರಂಭಿಸಿದರು. ಮಾಡುತ್ತಿದ್ದ ಕೆಲಸ ಬಿಟ್ಟು ಬಂದು ಗ್ರಾಮ ಪಂಚಾಯ್ತಿ ಎದುರು ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಿದರೂ, ಪಂಚಾಯ್ತಿ ಕಚೇರಿಯೊಳಗಿದ್ದ ಪಿಡಿಓ ಸೇರಿದಂತೆ ಇತರೆ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಪ್ರತಿಭಟನೆಯ ಕಾರಣವನ್ನೂ ಕೇಳುವ ಸೌಜನ್ಯ ತೋರಲಿಲ್ಲ ಎಂದು ಪ್ರತಿಭಟನಾ ನಿರತ ರೈತರೊಬ್ಬರು ’ನ್ಯೂಸ್ ಪೋಸ್ಟ್‌ಮಾರ್ಟಮ್‌’ ಬಳಿ ದೂರಿಕೊಂಡರು.

CLICK ಮಾಡಿ : ಒಂದೊಮ್ಮೆ ಮಗ ತನ್ನ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೂ ಸೇರಿಸದೇ ಹೋಗಿದ್ದರೆ...?!’

ಕೊನೆಗೂ ಹೊರಬಂದ ಅಧ್ಯಕ್ಷರು ಮತ್ತು ಪಿಡಿಓ ಎದುರು, ಕಳೆದ ವರ್ಷ ಸುರಿದ ಭಾರಿ ಮಳೆಗೆ ಚಾನಲ್ ದಂಡೆ ಒಡೆದು ನೂರಾರು ಎಕರೆ ಜಮೀನು ಜಲಾವೃತಗೊಂಡು ಭಾರಿ ನಷ್ಟ ಸಂಭವಿಸಿತ್ತು. ಇದರಿಂದಾಗಿ ತಮ್ಮ ಜಮೀನುಗಳಿಗೆ ನೀರು ಹರಿಸಲು ಸಾಧ್ಯವಾಗದೇ ಕಷ್ಟಕ್ಕೆ ಸಿಲುಕುವಂತಾಗಿತ್ತು. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ನೀರಾವರಿ ಇಲಾಖೆಗೆ ದೂರು ಅರ್ಜಿ ಸಲ್ಲಿಸಲಾಗಿದೆ. ಆದರೂ ಇದುವರೆಗೂ ಸಹ ಚಾನಲ್ ದಂಡೆ ದುರಸ್ತಿ ಕಾರ್ಯ ಮಾಡದಿರುವ ಬಗ್ಗೆ ಅಸಮಾಧಾನ ತೋಡಿಕೊಂಡರು. ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷರ ಮೂಲಕ ಸಂಬಂಧಿಸಿದ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು.

ರೈತರು ನೀಡಿದ ಮನವಿಯನ್ನು ಸಂಬಂಧಿಸಿದ ಇಲಾಖೆಗೆ ಕಳಿಸಲಾಗುವುದು ಎಂದು ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಹೇಳಿದರು. ಈ ಸಂದರ್ಭದಲ್ಲಿ ಪಿಡಿಓ ನಾಗರಾಜ್ ಇದ್ದರು.

ಕಾಮೆಂಟ್‌ಗಳಿಲ್ಲ