ಹೊಸನಗರದಲ್ಲಿ ತಾಲ್ಲೂಕು ಬಿಜೆಪಿಯ ನೂತನ ಕಚೇರಿ ಉದ್ಘಾಟಿಸಿದ ಸಂಸದ ಬಿ.ವೈ. ರಾಘವೇಂದ್ರ
ಹೊಸನಗರ : ಸಂಸದರಾದ ಬಿ.ವೈ. ರಾಘವೇಂದ್ರ ಅವರು ನಿನ್ನೆ ಹೊಸನಗರದಲ್ಲಿ ತಾಲ್ಲೂಕು ಭಾರತೀಯ ಜನತಾ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿದರು. ಹೊಸನಗರ ಬಸ್ ನಿಲ್ದಾಣದ ಎದುರಿನ ಎಸ್ ಎಲ್ ಎನ್ ಕಾಂಪ್ಲೆಕ್ಸಿನಲ್ಲಿ ಉದ್ಘಾಟನೆಗೊಂಡ ನೂತನ ಕಚೇರಿಯಲ್ಲಿ ಭಾರತ ಮಾತೆಯ ಫೋಟೋಗೆ ಪುಷ್ಪಾರ್ಚನೆ ಮಾಡಿ, ಆನಂತರ ಸ್ಥಳೀಯ ಮುಖಂಡರೊಂದಿಗೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಕುರಿತು ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಹರತಾಳು ಹಾಲಪ್ಪ, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಜಿಲ್ಲಾ ಮುಖಂಡರಾದ ಆರ್. ಮದನ್, ಉಮೇಶ್ ಕಂಚುಗಾರ, ವೀರೇಶ್, ಕೆ.ಎಸ್. ಪ್ರಶಾಂತ್, ಬೆಳಗೋಡು ಗಣಪತಿ, ಎನ್.ಆರ್. ದೇವಾನಂದ್, ಜಿಲ್ಲಾ ಮಹಿಳಾ ಮೋರ್ಚಾ ಮುಖಂಡರಾದ ಶ್ರೀಮತಿ ಗಾಯಿತ್ರಿ, ಮಂಗಳ, ಕೆ.ಟಿ. ನಾಗರತ್ನ, ಪದ್ಮ ಸುರೇಶ್, ನಾಗರತ್ನ ದೇವರಾಜ್, ಆಶಾ ರವೀಂದ್ರ, ಜೆಡಿಎಸ್ ನ ಅಧ್ಯಕ್ಷ ವರ್ತೇಶ್, ವರದರಾಜ ಮೊದಲಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ