Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಶಾಂತಿಕೆರೆ ಸಮೀಪ ಲಾರಿ-ಕಾರಿನ ನಡುವೆ ಮುಖಾಮುಖಿ ಅಪಘಾತ - ಇಬ್ಬರಿಗೆ ಗಾಯ

ಹೊಸನಗರ : ತಾಲ್ಲೂಕಿನ ಶಾಂತಿಕೆರೆ ಸಮೀಪ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ಇಂದು ನಡೆದಿದೆ.

ಹೊಸನಗರ ನಗರ ಮಾರ್ಗ ಮಧ್ಯದ ಶಾಂತಿಕೆರೆ ಸಮೀಪ ಕುಂದಾಪುರ ಕಡೆಯಿಂದ ಬರುತ್ತಿದ್ದ ಲಾರಿ ಮತ್ತು ಕಾರಗಡಿಯಿಂದ ಚಕ್ಕಾರು ಮದುವೆಗೆ ತೆರಳುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ತಲನೇರಿ ಶೇಖರಪ್ಪ ಗೌಡ ಮತ್ತು ನವೀನಾ ಎನ್ನುವವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕೂಡಲೇ ನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಅಪಘಾತದಿಂದಾಗಿ ರಸ್ತೆಯ ಎರಡೂ ಕಡೆ ನೂರಾರು ವಾಹನ ಸಾಲುಗಟ್ಟಿ ನಿಂತು ಕೆಲ ಸಮಯ ಟ್ರಾಫಿಕ್ ಜಾಮ್ ಆಗಿತ್ತು. ಅಪಘಾತಕ್ಕೊಳಗಾದ ಕಾರನ್ನು ಗ್ರಾಮಸ್ಥರೇ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ನಗರ ಎಎಸ್‌ಐ ಕುಮಾರ್ ಮತ್ತು ಸಿಬ್ಬಂದಿಗಳು ಘಟನಾ ಸ್ಥಳದಲ್ಲಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಕಾಮೆಂಟ್‌ಗಳಿಲ್ಲ