ಹೊಸನಗರ ಗೇರುಪುರ ಇಂದಿರಾಗಾಂಧಿ ವಸತಿ ಶಾಲೆ SSLCಯಲ್ಲಿ ಸತತ 3ನೇ ವರ್ಷ ಶೇ.100 ಫಲಿತಾಂಶ
ಹೊಸನಗರ : ಪಟ್ಟಣದಲ್ಲಿರುವ ಗೇರುಪುರದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಈ ಬಾರಿಯೂ ಶೇಕಡಾ 100 ಫಲಿತಾಂಶ ಗಳಿಸುವ ಮೂಲಕ, ಸತತ ಮೂರನೇ ವರ್ಷವೂ ಈ ಸಾಧನೆ ಮಾಡಿ ಹ್ಯಾಟ್ರಿಕ್ ಗಳಿಸಿದೆ.
ಶಾಲೆಯ ನಿತಿನ್ ಎಂ.ಆರ್. 625ಕ್ಕೆ 613 ಅಂಕಗಳಿಸಿ ಶಾಲೆಯ ಟಾಪರ್ ಆಗಿ ಹೊರಹೊಮ್ಮಿದ್ದಾನೆ. ಶಾಲೆಯ 17 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದರೆ, 19 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಾಮೆಂಟ್‌ಗಳಿಲ್ಲ