Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ನಗರದಲ್ಲಿ ಯಶಸ್ವಿಯಾಗಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಏಳು ದಿನಗಳ ಮಕ್ಕಳ ಶಿಬಿರ - ವಿದ್ಯೆಯ ಜೊತೆ ಪ್ರಾಪಂಚಿಕ ಜ್ಞಾನವೂ ಮುಖ್ಯ : ಕಾತ್ಯಾಯಿನಿ ಕುಂಜಿಬೆಟ್ಟು

ಹೊಸನಗರ : ಇಂದಿನ ಮಕ್ಕಳಿಗೆ ಉನ್ನತವಾದ ಶಿಕ್ಷಣ ನೀಡಿದರಷ್ಟೇ ಸಾಲದು, ವಿದ್ಯೆಯ ಜೊತೆ ಹಿರಿಯ ಕಿರಿಯರ ಹಾಗೂ ಕುಟುಂಬದವರೊಂದಿಗೆ ಅನ್ಯೋನ್ಯ ಬಾಂಧವ್ಯ, ನಮ್ಮ ನೆಲ ಜಲ ಪರಿಸರದ ಕುರಿತ ಪ್ರಾಪಂಚಿಕ ಜ್ಞಾನವನ್ನೂ ನೀಡುವುದು ಅತೀ ಮುಖ್ಯವಾಗಿದೆ ಎಂದು ಉಪನ್ಯಾಸಕಿ ಕಾತ್ಯಾಯಿನಿ ಕುಂಜಿಬೆಟ್ಟು ಅವರು ಹೇಳಿದರು.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

ಕನ್ನಡ ಸಾಹಿತ್ಯ ಪರಿಷತ್ತು ನಗರ ಹೋಬಳಿ ಘಟಕ, ಸುರಭಿ ಸ್ವ ಸಹಾಯ ಸಂಘ ನಗರ, ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತ್ಯಾಸಕ್ತ ಬಳಗದವರ ಸಹಯೋಗದಲ್ಲಿ ತಾಲ್ಲೂಕಿನ ನಗರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಮಕ್ಕಳ ಶಿಬಿರ ’ಕಾರಂಜಿ’ಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಇಂದಿನ ಮಕ್ಕಳು ಅತ್ಯಂತ ಬುದ್ಧಿವಂತರೂ, ಸುಶಿಕ್ಷಿತರೂ ಹೌದು. ಆದರೆ ಪುಸ್ತಕದ ಅಂಕಗಳು ಹೊರತುಪಡಿಸಿದರೆ ಸಾಮಾಜಿಕ ಕೌಟುಂಬಿಕ ಬಾಂಧವ್ಯಗಳ ಅರಿವು ಸಹ ಸಿಗಬೇಕಿದೆ, ಮಕ್ಕಳಿಗೆ ಪುಸ್ತಕದ ಪಾಠದ ಜೊತೆ ವಾಸ್ತವಿಕವಾದ ಜೀವನಾನುಭವವೂ ಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ವಿದ್ಯಾರ್ಥಿಗಳಿಗೆ ನಾವೆಲ್ಲರೂ ಮಾರ್ಗದರ್ಶನ ನೀಡಬೇಕಿದೆ ಎಂದರು.

ಉಡುಪಿ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹೆಚ್.ಪಿ.ರವಿರಾಜ್ ಮಾತನಾಡಿ, ಮಲೆನಾಡಿನ ಹಸಿರಿನ ಪರಿಸರದ ನಡುವೆ ಇಂತಹ ಬಿರು ಬೇಸಿಗೆಯಲ್ಲೂ ಇಲ್ಲಿ ತಂಪು ಇದ್ದು, ಬಿದನೂರು ಕೋಟೆ, ಬರೆಕಲ್ ಬತ್ತೇರಿಯ ನೋಟಗಳಿರುವ ಹಸಿರಿನ ಹೊರ ಪರಿಸರದಲ್ಲಿ ಶಿಬಿರ ಆಯೋಜಿಸಿರುವುದರ ಕುರಿತು ಶುಭ ಹಾರೈಸಿದರು. ಹಾಗೆಯೇ ಗ್ರಾಮೀಣ ಭಾಗದಲ್ಲಿ ಏಳು ದಿನಗಳ ಶಿಬಿರದಲ್ಲಿ ಭಾಗವಹಿಸಿದ್ದ ೫೦ಕ್ಕೂ ಹೆಚ್ಚಿನ ಮಕ್ಕಳಿಗೆ ಸಾಮಾಜಿಕ ಕಳಕಳಿಯ ಮಾಹಿತಿಗಳನ್ನೊಳಗೊಂಡ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು.

ಸಭೆಯ ಅಧ್ಯಕ್ಷತೆಯನ್ನು ನಗರ ಹೋಬಳಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿ. ನಾರಾಯಣ ಕಾಮತ್ ವಹಿಸಿದ್ದರು. ಸಮಾರಂಭದಲ್ಲಿ ಹೊಸನಗರ ತಾಲ್ಲೂಕು ಕಸಾಪದ ಅಧ್ಯಕ್ಷರಾದ ಗಣೇಶಮೂರ್ತಿ ನಾಗರಕೊಡಿಗೆ, ಡಾ.ವೈ.ಕೃಷ್ಣಮೂರ್ತಿ, ಸುರಭಿ ಸ್ವ ಸಹಾಯ ಸಂಘದ ಅಧ್ಯಕ್ಷರಾದ ಶಾರದಾ ಗೋಖಲೆ, ಶಿಕ್ಷಕರಾದ ಶಿವಶಂಕರಮಠ, ಪ್ರಹ್ಲಾದ ರಾವ್, ಪ್ರಕಾಶ್, ವಸುಧಾಚೈತನ್ಯ, ಶ್ರೀಧರಶೆಟ್ಟಿ, ನೇಮಿರಾಜ್, ಕರಾಟೆ ಶಿಕ್ಷಕ ಹರೀಶ್, ಚಕ್ರವಾಕ ಸುಬ್ರಹ್ಮಣ್ಯ, ಕವಿಗಳಾದ ಎಡ್ವರ್ಡ್ ಡಿಸೋಜ, ಹಿರಿಯ ಸಾಹಿತಿ ಅಂಬ್ರಯ್ಯಮಠ, ಸಾಹಿತಿ ನಿಟ್ಟೂರು ಶಾಂತಾರಾಮಪ್ರಭು, ಬಸಪ್ಪಗೌಡರು, ನೂತನ್‌ ಬೈಸೆ, ಶಿಕ್ಷಕಿಯರಾದ ಭಾಗ್ಯಶ್ರೀ, ಲಕ್ಷ್ಮೀ, ಸುನಿತಾ ಹಾಗೂ ಪೋಷಕರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು. 


ಕಾಮೆಂಟ್‌ಗಳಿಲ್ಲ