ಹೊಸನಗರದ 'ಮಂದಾರ ಫ್ಯಾಷನ್' ಲಕ್ಕಿ ಕೂಪನ್ ವಿಜೇತರಿಗೆ ಬಹುಮಾನ ವಿತರಣೆ
ಹೊಸನಗರ : ಇಲ್ಲಿನ ಚೌಡಮ್ಮ ರಸ್ತೆಯ ಪ್ರಸಿದ್ಧ ಬಟ್ಟೆ ಮಾರಾಟ ಮಳಿಗೆ 'ಮಂದಾರ ಫ್ಯಾಷನ್' ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗಾಗಿ ಏರ್ಪಡಿಸಿದ್ದ ಲಕ್ಕಿ ಕೂಪನ್ ಸ್ಕೀಂನಲ್ಲಿ ವಿಜೇತರಿಗೆ ಅಂಗಡಿ ಮಾಲೀಕ ವಿಠಲ್ ಗೌಡ ಇತ್ತೀಚೆಗೆ ಬಹುಮಾನ ವಿತರಿಸಿದರು.
ಪ್ರಥಮ ಬಹುಮಾನವಾದ 80 ಸಾವಿರ ರೂಪಾಯಿ ಪಟ್ಟಣದ ಶಿಕ್ಷಕಿ ಪ್ರಭಾವತಿ ಅವರದ್ದಾದರೆ, ದ್ವಿತೀಯ ಬಹುಮಾನ ವಾಷಿಂಗ್ ಮಿಶನ್ ಕೋಡೂರು ಗ್ರಾಮದ ಮಂಜುನಾಥ್ ಅವರದ್ದಾಯಿತು. ಬಹುಮಾನ ವಿಜೇತರಿಗೆ ವಿಠಲ್ ಗೌಡ ಬಹುಮಾನ ವಿತರಿಸಿ ಅಭಿನಂದಿಸಿದರು.
ಕಾಮೆಂಟ್‌ಗಳಿಲ್ಲ