Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಬೆಂಗಳೂರಿನ ವಿಧಾನಸೌಧ ಪುಸ್ತಕ ಮೇಳದಲ್ಲಿ ಹೊಸನಗರ ತಾಲ್ಲೂಕಿನ ಏಕೈಕ ಪುಸ್ತಕ ಪ್ರಕಾಶನ 'ಬೆನಕ ಬುಕ್ಸ್‌ ಬ್ಯಾಂಕ್‌' ಪುಸ್ತಕ ಮಾರಾಟ ಮಳಿಗೆ

ಹೊಸನಗರ : ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ’ವಿಧಾನಸಭೆ ಪುಸ್ತಕ ಮೇಳ - 2025’ರಲ್ಲಿ ತಾಲ್ಲೂಕಿನ ಮೊಟ್ಟಮೊದಲ ಅಧಿಕೃತ ಹಾಗೂ ಏಕೈಕ ಪುಸ್ತಕ ಪ್ರಕಾಶನ ಸಂಸ್ಥೆಯಾದ ಕೋಡೂರು ಯಳಗಲ್ಲಿನ ಬೆನಕ ಬುಕ್ಸ್‌ ಬ್ಯಾಂಕ್‌ ಪ್ರಕಾಶನ ಸಂಸ್ಥೆ ತನ್ನ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ತೆರೆದಿದೆ. 

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

ವಿಧಾನಸೌಧದ ಆವರಣದಲ್ಲಿ ಫೆಬ್ರವರಿ 27ರಿಂದ ಆರಂಭವಾಗಿರುವ 'ಕರ್ನಾಟಕ ವಿಧಾನಸಭೆ ಪುಸ್ತಕ ಮೇಳ - 2025' ಮಾರ್ಚ್‌ 3ನೇ ತಾರೀಖಿನವರೆಗೂ ನಡೆಯಲಿದ್ದು, ಮಾರ್ಚ್‌ 2ನೇ ತಾರೀಖಿನವರೆಗೆ ಸಾರ್ವಜನಿಕರಿಗೆ ಪುಸ್ತಕ ಮಳಿಗೆಗಳಿಗೆ ಹಾಗೂ ವಿಧಾನಸೌಧದ ಆವರಣಕ್ಕೆ ಉಚಿತ ಪ್ರವೇಶವಿರುತ್ತದೆ.

ತಾಲ್ಲೂಕಿನ ಮೊಟ್ಟಮೊದಲ ಅಧಿಕೃತ ಹಾಗೂ ಏಕೈಕ ಪುಸ್ತಕ ಪ್ರಕಾಶನ ಸಂಸ್ಥೆಯಾದ ಕೋಡೂರು ಗ್ರಾಮ ಯಳಗಲ್ಲಿನ ಬೆನಕ ಬುಕ್ಸ್‌ ಬ್ಯಾಂಕ್‌, ಮಳಿಗೆ ತೆರೆಯಲು ಸಲ್ಲಿಕೆಯಾಗಿದ್ದ 400ಕ್ಕೂ ಹೆಚ್ಚು ಅರ್ಜಿಗಳಲ್ಲಿ ಮಳಿಗೆಯನ್ನು ತೆರೆಯಲು ಆಯ್ಕೆಯಾಗಿದ್ದು, ಮಳಿಗೆ ಸಂಖ್ಯೆ 37ರಲ್ಲಿ ಬೆನಕ ಬುಕ್ಸ್‌ ಬ್ಯಾಂಕ್ ಪ್ರಕಾಶನ ಸಂಸ್ಥೆ ಈವರೆಗೆ ಪ್ರಕಟಿಸಿದ 100ಕ್ಕೂ ಹೆಚ್ಚು ಕೃತಿಗಳು ವಿಶೇಷ ರಿಯಾಯಿತಿ ದರದಲ್ಲಿ ಮಾರ್ಚ್‌ 3ರವರೆಗೂ ಮಾರಾಟಕ್ಕೆ ಲಭ್ಯವಿದೆ. 2010ರಲ್ಲಿ ಆರಂಭಗೊಂಡ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ಸಂಸ್ಥೆ ನಾಡಿನ ಬಹುತೇಕ ಹೊಸ ಬರಹಗಾರರ ಕಥೆ, ಕವನ, ಕಾದಂಬರಿ, ಲೇಖನ, ಅಂಕಣಬರಹ, ಜೀವನಕಥನ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರದ ನೂರಕ್ಕೂ ಅಧಿಕ ಕೃತಿಗಳನ್ನು ಈವರೆಗೆ ಪ್ರಕಟಿಸಿದೆ. ಜೊತೆಗೆ ಎರಡು ಇಂಗ್ಲೀಷ್ ಕೃತಿಗಳನ್ನು ಕೂಡಾ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಕಾಶನ ಸಂಸ್ಥೆಯ ಮೊಬೈಲ್ ಸಂಖ್ಯೆ 73384 37666ನ್ನು ಸಂಪರ್ಕಿಸಬಹುದು.


ಕಾಮೆಂಟ್‌ಗಳಿಲ್ಲ