ಕೆರೆಹಳ್ಳಿ ಹೊಸಳ್ಳಿ ಗ್ರಾಮದಲ್ಲಿ ಮಾಲು ಸಹಿತ ಸಿಕ್ಕಿಬಿದ್ದ ಇಬ್ಬರು ಶ್ರೀಗಂಧದ ಕಳ್ಳರು
ಹೊಸನಗರ : ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ಹೊಸಳ್ಳಿ ಗ್ರಾಮದ ಸರ್ವೇ ನಂಬರ್ 18ರ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಮರವನ್ನು ಅಕ್ರಮ ಕಡಿತಲೆ ಮಾಡಿ, ತುಂಡುಗಳನ್ನಾಗಿಸಿ ಬೈಕಿನಲ್ಲಿ ಸಾಗಿಸುತ್ತಿದ್ದ ಇಬ್ಬರು ಶ್ರೀಗಂಧ ಕಳ್ಳರನ್ನು ಅರಣ್ಯಾಧಿಕಾರಿಗಳು ಮಾಲು ಸಹಿತ ಬಂಧಿಸಿದ್ದಾರೆ.
ಹೊಸನಗರ ಅರಣ್ಯ ವಲಯದ ಸಿಬ್ಬಂದಿಗಳಿಗೆ ಶನಿವಾರ ಗಂಧದ ಮರ ಕಡಿಯುತ್ತಿರುವ ಬಗ್ಗೆ ವರ್ತಮಾನ ಬಂದ ಹಿನ್ನೆಲೆಯಲ್ಲಿ ಹೊಸಳ್ಳಿ ಗ್ರಾಮದ ಅರಣ್ಯ ಪ್ರದೇಶದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ದಿನೇಶ್ (31 ವರ್ಷ), ಹಾಗೂ ರಾಘವೇಂದ್ರ (32 ವರ್ಷ) ಮಾಲು ಸಹಿತ ಸಿಕ್ಕಿಬಿದ್ದಿದ್ದಾರೆ. ಇವರಿಂದ 18 ಕೆ.ಜಿ ಶ್ರೀಗಂಧ ಹಾಗೂ 3 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಹೊಸಕೆಸರೆ ಗ್ರಾಮದ ನೀರೇರಿ ವಾಸಿ ಎಂ. ಭದ್ರಪ್ಪ ಅಲಿಯಾಸ್ ಕರಿ ಮಂಜ (32)ಎಂಬಾತ ತಪ್ಪಿಸಿಕೊಂಡಿದ್ದು. ಈತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಕಾರ್ಯಾಚರಣೆಯಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್., ಮಂಜುನಾಥ ಕೆ. ಎನ್. ಉಪ ವಲಯ ಅರಣ್ಯಾಧಿಕಾರಿ, ಹರತಾಳು ಶಾಖೆ, ಪುಟ್ಟಸ್ವಾಮಿ ಕೆ. ವಿ., ಗಸ್ತು ಅರಣ್ಯ ಪಾಲಕ ಭರತ್ ಕುಮಾರ್, ಸುರೇಶ್ ಐ, ರಾಜು ಎನ್., ಪ್ರಶಾಂತ,.ಹಾಗೂ ವಾಹನ ಚಾಲಕರಾದ ಮಹೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳಿಲ್ಲ