Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸ್ತಿಕಟ್ಟೆಯ ವಾಸು ಪೂಜಾರಿಗೆ ಮನೆ ನಿರ್ಮಾಣ-ಹಸ್ತಾಂತರ

ಹೊಸನಗರ : ತಾಲ್ಲೂಕಿನ ಮಾಸ್ತಿಕಟ್ಟೆ ವಲಯ ಹುಲಿಕಲ್ ಗ್ರಾಮದ ನಿವಾಸಿ ವಾಸು ಪೂಜಾರಿಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣ ಮಾಡಿಕೊಡಲಾಗಿದ್ದು, ಅದನ್ನು ಇಂದು ತಹಶೀಲ್ದಾರ್‌ ರಶ್ಮಿ ಹೆಚ್‌.ಜೆ ಅವರು ಹಸ್ತಾಂತರಿಸಿದರು.

ವಾಸು ಪೂಜಾರಿಯವರಿಗೆ ಮನೆ ಹಸ್ತಾಂತರಿಸಿ ಮಾತನಾಡಿದ ರಶ್ಮಿ ಹೆಚ್‌.ಜೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದು  ಈ ಯೋಜನೆಯಿಂದ ಸದಸ್ಯರಿಗೆ ಉಳಿತಾಯ ಮಾಡುವಂತಹ ಮನೋಭಾವನೆ ಮೂಡುತ್ತಿದೆ. ಮತ್ತು ಪಡೆದ ಸಾಲದಿಂದ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳನ್ನು ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಎಲ್ಲಾ ಮಹಿಳೆಯರಲ್ಲಿ ಬ್ಯಾಂಕಿನ ವ್ಯವಹಾರದ ಬಗ್ಗೆ ಅರಿವು ಮೂಡುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕಿನ ಯೋಜನಾಧಿಕಾರಿಗಳಾದ ಪ್ರದೀಪ್, ಅಂಗವಿಕಲವಿಕರಿಗೆ ಸಲಕರಣೆ ವಿತರಣೆ, ಮಾಸಾಶನ ವಿತರಣೆ, ವಾತ್ಸಲ್ಯ ಗೃಹ ನಿರ್ಮಾಣ ಇನ್ನೂ ಮೊದಲಾದ ಜನಕಲ್ಯಾಣ ಕಾರ್ಯದ ಮೂಲಕ ಬಡವರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಿದರು.

CLICK ಮಾಡಿ - ಬೆಂಗಳೂರಿನ ವಿಧಾನಸೌಧ ಪುಸ್ತಕ ಮೇಳದಲ್ಲಿ ಹೊಸನಗರ ತಾಲ್ಲೂಕಿನ ಏಕೈಕ ಪುಸ್ತಕ ಪ್ರಕಾಶನ 'ಬೆನಕ ಬುಕ್ಸ್‌ ಬ್ಯಾಂಕ್‌' ಪುಸ್ತಕ ಮಾರಾಟ ಮಳಿಗೆ

ಸಮಾರಂಭದಲ್ಲಿ ಉಪಸ್ಥಿತರಿದ್ದ ಪಂಚಾಯಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಬಂದಮೇಲೆ ನಮ್ಮ ಗ್ರಾಮ ಅಭಿವೃದ್ಧಿಯಾಗಿರುತ್ತದೆ ಎಂದು ತಿಳಿಸಿದರು.

ವಾಸು ಪೂಜಾರಿ ಅವರ ಆಶ್ರಯಕ್ಕೆ ಯಾರು ಇಲ್ಲದೆ, ತೀರಾ ಬಡತನದಿಂದ ಬೇರೆಯವರ ಮನೆಯ ಕೊಟ್ಟಿಗೆಯಲ್ಲಿ ದಿನ ಕಳೆಯುತ್ತಿದ್ದು ಇವರ ಈ ಸ್ಥಿತಿಯನ್ನು ಕಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ತಿಂಗಳಿಗೆ ರೂಪಾಯಿ 1000ದಂತೆ ಮಾಸಾಸನವನ್ನು ನೀಡುತ್ತಿದ್ದು, ಇದೀಗ ಅವರಿಗೆ ಮನೆಯನ್ನೂ ನಿರ್ಮಾಣ ಮಾಡಿಕೊಟ್ಟಿದೆ.

ಪಂಚಾಯಿತಿ ಪಿಡಿಓ ಸಂತೋಷ್, ಪಂಚಾಯಿತಿಯ ಉಪಾಧ್ಯಕ್ಷರಾದ ರಂಜಿತ ಪ್ರಕಾಶ್ ಹಾಗೂ ಜನಜಾಗೃತಿ ವೇದಿಕೆಯ ಸದಸ್ಯರಾದ ದೇವಾನಂದ್ ಎನ್. ಆರ್, ನಾರಾಯಣ ಕಾಮತ್, ದೇವೇಂದ್ರಪ್ಪ, ಒಕ್ಕೂಟದ ಅಧ್ಯಕ್ಷರಾದ ಸಂಜೀವ ಭಂಡಾರಿ, ವಲಯ ಮೇಲ್ವಿಚಾರಕರಾದ ಮಧುಕೇಶ್ವರ್ ಹಾಗೂ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಾಂತಕುಮಾರಿ, ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಊರಿನ ಗಣ್ಯರು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ