Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಬಾಡಿಗೆ ಬಾಕಿ ಉಳಿಸಿಕೊಂಡ ಹೊಸನಗರ ಪಟ್ಟಣ ಪಂಚಾಯಿತಿ ಮಳಿಗೆಗಳಿಗೆ ಬೀಗ ಮುದ್ರೆ - ರೂ 2.50 ಲಕ್ಷ ನಗದು ಹಾಗೂ ರೂ 9 ಲಕ್ಷ ಬಾಡಿಗೆ ಹಣ ಚೆಕ್ ಮೂಲಕ ವಸೂಲಿ

ಹೊಸನಗರ: ಹಲವು ತಿಂಗಳುಗಳಿಂದ ಬಾಡಿಗೆ ಬಾಕಿ ಉಳಿಸಿಕೊಂಡಿದ್ದ ಪಟ್ಟಣ ಪಂಚಾಯಿತಿಗೆ ಸೇರಿದ ಮಳಿಗೆಗಳ ಪಟ್ಟಿ ಹಿಡಿದು, ಮುಖ್ಯಾಧಿಕಾರಿ ಎಂ.ಎನ್.ಹರೀಶ್ ನೇತೃತ್ವದಲ್ಲಿ ಇಂದು ಬೆಳ್ಳಂಬೆಳಗ್ಗೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗವು ಮಿಂಚಿನ ಕಾರ್ಯಾಚರಣೆ ನಡೆಸಿ ಹಲವು ಮಳಿಗೆಗಳಿಗೆ ಬೀಗ ಮುದ್ರೆ ಹಾಕಿ, ಎಚ್ಚರಿಕೆಯ ನೋಟಿಸ್ ಅಂಟಿಸಿ ಬಾಡಿಗೆ ಬಾಕಿ ಉಳಿಸಿಕೊಂಡ ಮಳಿಗೆಗಳ ಬಾಡಿಗೆದಾರರಿಗೆ ಶಾಕ್‌ ನೀಡಿತು.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

ಇಲ್ಲಿನ ಚೌಡಮ್ಮ ರಸ್ತೆ, ಎಸ್‌‌ಬಿಐ ಬ್ಯಾಂಕ್‌ ಮುಂಭಾಗ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿನ ಪಟ್ಟಣ ಪಂಚಾಯಿತಿಗೆ ಸೇರಿದ ಹಲವು ಮಳಿಗೆಗಳ ಮಾಸಿಕ ಬಾಡಿಗೆ ನಿಗದಿತ ಸಮಯಕ್ಕೆ ಪಾವತಿಯಾಗದೆ, ಇತ್ತೀಚಿನ ಸಾಮಾನ್ಯ ಸಭೆಯಲ್ಲಿ ಸದಸ್ಯರು ಬಾಡಿಗೆ ವಸೂಲಿಗೆ ಅಗತ್ಯ ಕ್ರಮ ವಹಿಸಬೇಕು ಎಂಬ ಒಕ್ಕೊರಲಿನ ಧ್ವನಿಗೆ ಮುಖ್ಯಾಧಿಕಾರಿ ಎಂ.ಎನ್.ಹರೀಶ್ ನೇತೃತ್ವದಲ್ಲಿ ಇಂದು ಬೀಗಮುದ್ರೆ ಕಾರ್ಯಾಚರಣೆ ನಡೆದಿದೆ.

CLICK ಮಾಡಿ - ಹೊಸನಗರದಲ್ಲಿ ಎಬಿವಿಪಿ ವಿದ್ಯಾರ್ಥಿ ನಾಯಕರ ಸಭೆ - ತಾಲ್ಲೂಕು ಸಂಚಾಲಕರಾಗಿ ಪ್ರಮೋದ್ ಮುಮ್ಮನೆ ಆಯ್ಕೆ

ಕೆಲವು ಬಾಡಿಗೆದಾರರು ಸ್ಥಳದಲ್ಲೇ ಚಾಲ್ತಿ ಮಾಸದ ತನಕ ಬಾಡಿಗೆ ಬಾಕಿ ಪಾವತಿಸಿದರೆ, ಇನ್ನೂ ಕೆಲವು ಮಳಿಗೆಗಳ ಬಾಡಿಗೆದಾರರು ಸ್ವಲ್ಪ ನಗದು ಹಾಗೂ ಬಾಕಿಯನ್ನು ಚೆಕ್ ಮೂಲಕ ನೀಡಿದರು. ವಸೂಲಾತಿ ವೇಳೆ ಸಿಬ್ಬಂದಿ ಹಾಗೂ ಬಾಡಿಗೆದಾರರ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು. ಕಟ್ಟಡ ಸೋರುತ್ತಿದೆ,‌ ದುರಸ್ತಿ ಮಾಡಿಸಿ ಎಂದು ಅನೇಕ ಬಾರಿ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಆದರೆ, ಬಾಡಿಗೆ ವಸೂಲಿಗೆ ದಂಡು ಕಟ್ಟಿಕೊಂಡು ಬರುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮಳೆಗಾಲ ಆರಂಭಕ್ಕೂ ಮುನ್ನ ಕಟ್ಟಡ ದುರಸ್ತಿಗೊಳಿಸಿ. ತಪ್ಪಿದಲ್ಲಿ ಕಚೇರಿ ಎದುರು ಸಾಮೂಹಿಕ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಬಾಡಿಗೆದಾರ ವಾದಿರಾಜ್ ನೀಡಿದರು.

ಇದಕ್ಕೆ ಮುಖ್ಯಾಧಿಕಾರಿ ಹರೀಶ್, ಮೊದಲು ಬಾಕಿ ಬಾಡಿಗೆ ಪಾವತಿಸಿ. ಮುಂದೆ ಕಟ್ಟಡ ದುರಸ್ತಿಗೆ ಕ್ರಮಕೈಗೊಳ್ಳೋಣ ಎಂದು ಭರವಸೆಯ ಮೂಲಕ ಸಂತೈಸಿದರು.

ಟೆಂಡರ್‌‌ದಾರರು ಹೆಚ್ಚಿನ ಬಾಡಿಗೆ ಆಸೆಗೆ ಬೇರೆಯವರಿಗೆ ಒಳ ಬಾಡಿಗೆ ನೀಡಿರುವ ಸಂಗತಿ ಇದೇ ಸಂದರ್ಭದಲ್ಲಿ ಬೆಳಕಿಗೆ ಬಂತು.

ಒಟ್ಟಾರೆ ರೂ ಸುಮಾರು 40ಲಕ್ಷಕ್ಕೂ ಅಧಿಕ ಮೊತ್ತದ ಬಾಡಿಗೆ ಹಣ ಬಾಕಿ ಇದ್ದು, ಇಂದು ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಸುಮಾರು ರೂ 2.50 ಲಕ್ಷ ನಗದು ಹಾಗೂ ರೂ. 9 ಲಕ್ಷ ಮೌಲ್ಯದ ಬಾಡಿಗೆ ಚೆಕ್ ಮೂಲಕ ವಸೂಲಿಯಾಯಿತು.

ಈ ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕ ಮಂಜುನಾಥ, ಕರ ವಸೂಲಿಗಾರ ಪರಶುರಾಮ, ಸಿಬ್ಬಂದಿ ನಾಗರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.


ಕಾಮೆಂಟ್‌ಗಳಿಲ್ಲ