ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆ - ಹೊಸನಗರ ತಾಲ್ಲೂಕಿಗೆ ರಮ್ಯ ಚಂದ್ರು ಪ್ರಥಮ
ಹೊಸನಗರ : ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ ನಡೆಸಿದ 2023-24ನೇ ಸಾಲಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಜ್ಯೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಪಟ್ಟಣದ ಮಾಧುರಿ ದೇವಾನಂದ್ ನೇತೃತ್ವದ ಶ್ರೀ ಶಾರದ ಸಂಗೀತ ಶಾಲೆಯ ವಿದ್ಯಾರ್ಥಿನಿ ರಮ್ಯ ಚಂದ್ರು ( 95%) ಅಂಕ ಗಳಿಸುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ.
ಉಳಿದಂತೆ ಶಾರ್ವರಿ ಎ ಉಡುಪ (86.5%), ನಿಶ್ಮಿತಾ ಎಸ್ ಪೂಜಾರಿ (86%) ಹಾಗೂ ಡಿ.ಧನ್ಯಶ್ರೀ (82%) ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಉತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳ ಸಾಧನೆಯನ್ನು ಮಾಧುರಿ ದೇವಾನಂದ್ ಶ್ಲಾಘಿಸಿದ್ದಾರೆ.
ಸಂಗೀತ ಕ್ಷೇತ್ರದಲ್ಲಿನ ಈ ನಾಲ್ವರ ಸಾಧನೆಗೆ ಹೊಸನಗರ ಪಟ್ಟಣದ ನಾಗರೀಕರು ಅಭಿನಂದನೆ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ