ಹೊಸನಗರ ಕಸಾಪದಿಂದ ರಾಮಚಂದ್ರಪುರ ಮಠದ ದತ್ತಿನಿಧಿ ಕಾರ್ಯಕ್ರಮ
ಹೊಸನಗರ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇತ್ತೀಚೆಗೆ ರಾಮಚಂದ್ರಪುರ ಮಠದ ದತ್ತಿನಿಧಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ದತ್ತಿನಿಧಿ ಕಾರ್ಯಕ್ರಮದ ಅಂಗವಾಗಿ ಹನಿಯ ರವಿ ಅವರು ಧರ್ಮ ಮತ್ತು ಧಾರ್ಮಿಕತೆಯ ಬಗ್ಗೆ ಮಾತನಾಡಿ, ಧಾರ್ಮಿಕತೆ ಧರ್ಮದ ಮೂಲ. ಧರ್ಮ ಎಂಬುದು ಮತವಲ್ಲ. ಮತ ಮತದ ನಡುವೆ ಭಿನ್ನಾಭಿಪ್ರಾಯಗಳು ಸಲ್ಲದು. ಯಾವುದು ಮನುಕುಲಕ್ಕೆ ಹಿತವನ್ನು ನೀಡುತ್ತದೆಯೋ ಅದೇ ಧರ್ಮ, ಅದೇ ಧಾರ್ಮಿಕತೆ. ಪರಪೀಡೆಯನ್ನು ಮಾಡದೆ ಪರೋಪಕಾರ ಮಾಡುವುದೇ ನಿಜವಾದ ಧರ್ಮ ಎಂದು ಹೇಳಿದರು. ಜೊತೆಗೆ ವ್ಯಾಸರು ಹೇಳಿದ ಮಾತನ್ನು ಉಲ್ಲೇಖಿಸಿ ಧಾರ್ಮಿಕತೆಯ ಬಗ್ಗೆ ವಿಮರ್ಶಿಸಿದರು.
CLICK ಮಾಡಿ - ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆ - ಹೊಸನಗರ ತಾಲ್ಲೂಕಿಗೆ ರಮ್ಯ ಚಂದ್ರು ಪ್ರಥಮ
ಹೊಸನಗರ ತಾಲ್ಲೂಕು ಕಸಾಪ ಅಧ್ಯಕ್ಷರಾದ ಗಣೇಶ್ ಮೂರ್ತಿಯವರು ಮಾತನಾಡಿ, ಸಮಯ ಪಾಲನೆಯು ಒಂದು ಧರ್ಮ. ಈ ಧರ್ಮವನ್ನು ಪಾಲಿಸಿದರೆ ಜೀವನದಲ್ಲಿ ಯಶಸ್ಸು ಸಿಗಲು ಸಾಧ್ಯ ಎಂದು ಹೇಳಿದರು. ಮತ್ತು ಎಲ್ಲರೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಗಳಿಗೆ ಕೈಜೋಡಿಸಿ ನಾಡು ನುಡಿಯನ್ನು ಉಳಿಸಿ ಬೆಳೆಸಬೇಕು ಎಂದು ಮನವಿ ಮಾಡಿದರು.
ಡಿ. ಎಸ್. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದಪ್ಪ ಸ್ವಾಗತಿಸಿ, ಅಶ್ವಿನಿ ಪಂಡಿತ್ ವಂದಿಸಿದರು. ಕಸಾಪ ಕಾರ್ಯದರ್ಶಿ ಕುಬೇಂದ್ರಪ್ಪ ಕುವೆಂಪು ಗೀತೆ ಹಾಡಿದರು.
ಶ್ರೀಕರ ಮತ್ತು ಸುಪ್ರಿತ ಕವಿತೆ ಓದಿದರು. ಮಠದ ಪರವಾಗಿ ರಾಘವೇಂದ್ರ ಮಧ್ಯಸ್ಥರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ. ಎನ್. ಬಸಪ್ಪ, ನಳಿನ್ ಚಂದ್ರ ದಂಪತಿಗಳು, ವಿಶ್ವೇಶ್ವರ ದಂಪತಿಗಳು ಸೇರಿದಂತೆ ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಮೆಂಟ್‌ಗಳಿಲ್ಲ